ಉಡುಪಿ ಪೇಜಾವರ ಮಠದ ಎಸಿಯಲ್ಲಿ ಬೆಂಕಿ ಆಕಸ್ಮಿಕ: ಅಗ್ನಿಶಾಮಕದಳದಿಂದ ಕಾರ್ಯಾಚರಣೆ
Update: 2021-03-07 16:18 IST
ಉಡುಪಿ, ಮಾ.7: ಉಡುಪಿ ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿನ ಎಸಿ(ಏರ್ ಕಂಡಿಷನ್)ಯಲ್ಲಿ ಬೆಂಕಿ ಕಾಣಸಿಕೊಂಡ ಘಟನೆ ಇಂದು ಮಧ್ಯಾಹ್ನ ವೇಳೆ ನಡೆದಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅದರ ಹೊಗೆ ಇಡೀ ಕೊಠಡಿಗೆ ಆವರಿಸಿತ್ತೆನ್ನಲಾಗಿದೆ. ಕೂಡಲೇ ಮಠದ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅದರಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದರು.
ಈ ಅವಘಡದಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.