ಪಿಲಾರ್: ಹಿಜಾಮ ಚಿಕಿತ್ಸಾ ಶಿಬಿರ

Update: 2021-03-07 11:39 GMT

ಉಳ್ಳಾಲ : ಆಯುಷ್ ಚಿಕಿತ್ಸಾ ಶಿಬಿರ ದಲ್ಲಿ ಹಿಜಾಮ ಕೂಡ ಒಂದಾಗಿದೆ. ವೈದ್ಯರ ಬಳಿ ಹೋದರೆ ಔಷಧಿ ನೀಡುವ ಜೊತೆಗೆ ಸಲಹೆ ಸೂಚನೆ ಕೂಡಾ ನೀಡಬೇಕು. ವೈದ್ಯರ ಸಲಹೆ ರೋಗಿಗಳು ಪಾಲಿಸಬೇಕಾಗುತ್ತದೆ ಎಂದು ಡಾ.ಝಾಹಿದ್ ಹುಸೈನ್  ಹೇಳಿದರು.

ಅವರು ಜಮಾಅತ್ ಇಸ್ಲಾಮಿ ಹಿಂದ್ ಉಳ್ಳಾಲ ಇದರ ಆಶ್ರಯದಲ್ಲಿ ಪಿಲಾರ್ ವಿಷನ್ ಸೆಂಟರ್ ನಲ್ಲಿ ನಡೆದ ಹಿಜಾಮ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮುಹಮ್ಮದ್ ಗಫೂರ್ ಕುಳಾಯಿ ಮಾತನಾಡಿ, ದೈಹಿಕ ಹಾಗೂ ಮಾನಸಿಕ ರೋಗ ಎಂಬೆರಡು ರೋಗಗಳಿವೆ. ಎಲ್ಲದಕ್ಕೂ ಪ್ರತ್ಯೇಕ ಚಿಕಿತ್ಸೆ ಕೂಡಾ ಇರುತ್ತದೆ. ಆದರೆ ಕೆಲವರು ರೋಗ ಇಲ್ಲದಿದ್ದರೂ ರೋಗ ಇದೆ ಎಂದು ಭಾವಿಸುವುದು ಮಾನಸಿಕ ಸಮಸ್ಯೆ ಯಿಂದ ಆಗಿದೆ. ನಾವು ರೋಗ ಸೃಷ್ಟಿ ಮಾಡುವ ಹಾಗೆ ವರ್ತಿಸಬಾರದು ಎಂದು ಹೇಳಿದರು.

ಮುಹಮ್ಮದ್ ಅಸ್ಲಾಂ, ಅಬ್ದುಲ್ ಕರೀಂ, ಉದಯ ಗಟ್ಟಿ, ಜಮಾಲುದ್ದೀನ್ ಪಿಲಾರಾ, ಡಾ. ಝಾಹಿದ್ ಹುಸೈನ್, ಡಾ. ಬಸವರಾಜ್, ಡಾ.ಮುಬೀನ, ಡಾ.ನಯೀಮ್ ,ಅಬ್ದುಲ್ ಗಫೂರ್ ಕುಳಾಯಿ, ಡಾ.ಹುನೈಸ್ ಮುಹಮ್ಮದ್, ಡಾ. ನೂರಿನ್ನಿಸಾ ಮೊದಲಾದವರು ಉಪಸ್ಥಿತರಿದ್ದರು.

ಅಹ್ಮದ್ ಶರೀಫ್ ಸ್ವಾಗತಿಸಿದರು.ನಿಝಾಮುದ್ದೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News