ಟ್ವಿಟರ್‌ ನಲ್ಲಿ ʼಬಿಜೆಪಿ ಸಿಡಿ ಸ್ಕ್ಯಾಂಡಲ್‌ʼ ಟ್ರೆಂಡ್:‌ ಕಮಲದ ಬದಲು ಸಿಡಿಯನ್ನು ಚಿಹ್ನೆಯಾಗಿಸಲಿ ಎಂದ ನೆಟ್ಟಿಗರು!

Update: 2021-03-07 12:02 GMT

ಹೊಸದಿಲ್ಲಿ: ಕರ್ನಾಟಕದ ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿಯವರದ್ದೆನ್ನಲಾದ ಸಿಡಿಯೊಂದನ್ನು ಬಿಡುಗಡೆ ಮಾಡಿದ ಬಳಿಕ ರಾಜ್ಯ ರಾಜಕಾರಣದಲ್ಲೇ ತಲ್ಲಣ ಉಂಟಾಗಿತ್ತು. ಈ ಕುರಿತಾದಂತೆ ಬಿಜೆಪಿಯ ಮುಖಂಡರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಸಾಮಾಜಿಕ ತಾಣದಲ್ಲೂ ಈ ಪ್ರಕರಣದ ಕುರಿತಾದಂತೆ ಚರ್ಚೆಗಳು ನಡೆಯುತ್ತಿದ್ದು, #BJPCDScandal ಹ್ಯಾಶ್‌ ಟ್ಯಾಗ್‌ ಟ್ವಿಟರ್‌ ನಲ್ಲಿ ಟ್ರೆಂಡ್‌ ಆಗಿದೆ.

"ಬಿಜೆಪಿ ಪಕ್ಷಕ್ಕೆ ಕಮಲ ಚಿಹ್ನೆಯ ಬದಲು ಸಿಡಿ ಚಿಹ್ನೆಯನ್ನು ನೀಡಬೇಕಾಗಿ ನಾನು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತಿದ್ದೇನೆ ಎಂದು ಜಮ್ಮುಕಾಶ್ಮೀರದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಶಾನವಾಝ್‌ ಚೌಧರಿ ಟ್ವೀಟ್‌ ಮಾಡಿದ್ದಾರೆ. ಬಿಜೆಪಿ ನಾಯಕರಿಂದಾಗಿ ರಾಜಕೀಯವು ಸಂಪೂರ್ಣ ಸಕಾರಾತ್ಮಕತೆಯನ್ನು ಕಳೆದುಕೊಳ್ಳುತ್ತಿದೆ. ನ್ಯಾಯಾಂಗವು ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಬಳಕೆದಾರರೋರ್ವರು ಟ್ವೀಟಿಸಿದ್ದಾರೆ.

ಈ ಪ್ರಕರಣದ ಜೊತೆಗೆ ಈ ಹಿಂದೆ ಇಂತಹಾ ಪ್ರಕರಣಗಳಲ್ಲಿ ಸಿಲುಕಿದ್ದ ಇತರ ಬಿಜೆಪಿ ಮುಖಂಡರ ಕುರಿತು ನೆಟ್ಟಿಗರು ನೆನಪಿಸಿದ್ದಾರೆ. "ಅಸೆಂಬ್ಲಿಯಲ್ಲಿ ನೀಲಿಚಿತ್ರ ವೀಕ್ಷಿಸಿ ಸಿಕ್ಕಿ ಬಿದ್ದ ವ್ಯಕ್ತಿ ಈಗ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ನೇಮಲವಾಗಿದ್ದಾರೆ ಎಂಬ ತಲೆಬರಹವಿರುವ ಮಾಧ್ಯಮ ವರದಿಯೊಂದನ್ನೂ ಬಳಕೆದಾರರೋರ್ವರು ಟ್ವೀಟ್‌ ಮಾಡಿದ್ದಾರೆ.  ಸದ್ಯ ಪಕ್ಷದಲ್ಲಿ ಸುಷ್ಮಾ ಸ್ವರಾಜ್‌ ರವರು ಇಲ್ಲ. ಆದರೆ ಉಳಿದ ಹಲವಾರು ಮಹಿಳಾ ನಾಯಕಿಯರಿದ್ದಾರೆ. ಅವರೆಲ್ಲಾ ಈ ಪ್ರಕರಣದ ಕುರಿತು ಮಾತನಾಡುತ್ತಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News