ಶ್ರದ್ಧಾಭಕ್ತಿಯ ಸತ್ಕರ್ಮಗಳು ಸೃಷ್ಠಿಕರ್ತ ಸ್ವೀಕರಿಸುತ್ತಾನೆ : ಅಸಯ್ಯಿದ್ ಅಲಿಯಾರ್ ತಂಙಳ್

Update: 2021-03-07 12:38 GMT

ಹಳೆಯಂಗಡಿ : ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಆದೀನದಲ್ಲಿ ಪ್ರತೀ ವರ್ಷ ನಡೆಯುವ ಲಿಯಾವುಲ್ ಇಸ್ಲಾಂ ದಪ್ಪ್‌ ಕಮೀಟಿ ಇದರ 38ನೇ ವಾರ್ಷಿಕ ರಿಫಾಯ್ಯಿ ದಪ್ ರಾತಿಬ್ ಮತ್ತು ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭ ಶನಿವಾರ ರಾತ್ರಿ ಬೊಳ್ಳೂರು ಜುಮಾ ಮಸೀದಿಯ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ದುವಾಃ ಆಶಿರ್ವಚನ ನೀಡಿ ಮಾತನಾಡಿದ ಕೇರಳದ ಮಲಪ್ಪುರಂ ಜಿಲ್ಲೆಯ ಅಸಯ್ಯಿದ್ ಅಲಿಯಾರ್ ತಂಙಳ್, ಯಾವುದೇ ಸತ್ಕರ್ಮಗಳನ್ನು ಮಾಡುವಾಗಲೂ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಿದರೆ ಮಾತ್ರ ಅದನ್ನು ಸೃಷ್ಠಿಕರ್ತನು ಸ್ವೀಕರಿಸು ತ್ತಾನೆ. ನಮ್ಮ ಪೂರ್ವಿಕರು ಧರ್ಮದ ಎಲ್ಲಾ ಕಟ್ಟುಪಾಡುಗಳನ್ನು ಬಹಳ ಶ್ರದ್ಧೆಯಿಂದ ನೆರವೇರಿಸುತ್ತಿದ್ದರು. ಅದನ್ನೇ ನಾವು ಮುಂದುವರಿಸಿ ಕೊಂಡು ಹೋಗಬೇಕು ಎಂದು ಹೇಳಿದರು.

ಕಾರ್ಯಕ್ರಮಎದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಮುಹಮ್ಮದ್ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್, ಶೈಖುನಾ ಅಹ್ಮದುಲ್ ಖಬೀರ್ ರಿಫಾಯಿ ಅವರ ಅನುಸ್ಮರಣೆ ನಮಗೆಲ್ಲಾ ಮಾದರಿ ಎಂದರು. ಮಾರಕ ರೋಗ ಕೋವಿಡ್ ರೂಪಾಂತರಗೊಂಡು ನಾಡಿಗೆ ಪಸರಿಸುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರೂ ಕೋವಿಡ್ ನಿಯಾಮಾವಳಿಗಳನ್ನು ಪಾಲಿಸಿ ಜಾಗ್ರತೆ ವಹಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಸ್ತ ಕೇಂದ್ರ ಮುರಾವರದ ಸದಸ್ಯ ಅಲ್‌ಹಾಜಿ ಅಬ್ದುಲ್ ಕಾದಿರಿ ಅಲ್ ಖಾಸಿಮಿ ಬಂಬ್ರಾಣ ಮಾತನಾಡಿ, ಯುವ ಜನತೆ ಸಜ್ಜನಿಕತೆಯಲ್ಲಿ ತೊಡಗಿಸಿಕೊಳ್ಳಬೇಕು. ಇನ್ನೊಬ್ಬರನ್ನು ನೋಯಿಸುವ ಅಥವಾ ನಮ್ಮೊಳಗೆ ಭಿನ್ನತೆ ಸೃಷ್ಟಿಯಾ ಗುವ ವಿಚಾರಗಳಿಂದ ಪ್ರತಿಯೊಬ್ಬರೂ ದೂರ ಇರಬೇಕು. ಸತ್ಕಾರ್ಯಗಳಿಂದ ನಮ್ಮ ಹೃದಯ ಪ್ರಕಾಶಿಸುತ್ತಿರುವಂತೆ ಮಾಡಬೇಕೆಂದರು.

ಸಮಾರಂಭದಲ್ಲಿ ಮಾಡನ್ನೂರು ಜುಮಾ ಮಸೀದಿಯ ಖತೀಬ್ ಹಾಜಿ ಸಿರಾಜುದ್ದೀನ್ ಫೈಝಿ, ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಕೆ.ಎಚ್. ಅಬ್ದುಲ್ ರಹಿಮಾನ್ ಫೈಝಿ, ಪಕ್ಷಿಕೆರೆ ಜುಮಾ ಮಸೀದಿಯ ಖತೀಬ್ ಆದಂ ಅಮಾನಿ, ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ ಪಾತೂರು, ಸದರ್ ಮುಅಲ್ಲಿಂ ಹನೀಫ್ ದಾರಿಮಿ ಅಂಕೋಲ, ಇಸ್ಮಾಯಿಲ್ ಮದನಿ, ಸಂತಕಟ್ಟೆ, ಬೊಳ್ಳೂರು ಮದರಸ ಶಿಕ್ಷಕರಾದ ಸಿರಾಜುದ್ದೀನ್ ಫೈಝಿ, ರಿಯಾಝ್ ಫೈಝಿ, ಹಾಜಿ ಬಿ.ಎಚ್. ಅಬ್ದುಲ್ ಕಾದರ್ ಎ.ಕೆ., ಗ್ರಾಮ ಪಂಚಾಯತ್ ಸದಸ್ಯರಾದ ಎಂ. ಅಬ್ದುಲ್ ಕಾದರ್, ಅಬ್ದುಲ್ ಅಝೀಝ್ ಐ.ಎ.ಕೆ. ಅಧ್ಯಕ್ಷರು ಲಿಯಾವುಲ್ ಇಸ್ಲಾಂ ಧಫ್ ಕಮಿಟಿ ಉಪಾಧ್ಯಕ್ಷ ಯೂಸುಫ್ ಹೈದರ್ ಪದ್ಮನೂರು, ಕಾರ್ಯದರ್ಶಿಗಳಾದ ಅಬ್ದುಲ್ ರಹಿಮಾನ್, ಉಮ್ಮರ್ ಫಾರೂಕ್ ಉಪಸ್ಥಿತರಿದ್ದರು.

ಸದರ್ ಮುಅಲ್ಲಿಂ ನಾಸೀರ್ ಮುಸ್ಲಿಯಾರ್ ಸ್ವಾಗತಿಸಿದ ಮಾತನಾಡಿದರು. ತಯ್ಯಿಬ್ ಫೈಝಿ ಕಾರ್ಯಕ್ರಮ ನಿರೂಪಿಸಿದರು. ಮೊಯ್ದೀನ್ ಇಂದಿರಾನಗರ ವಂದಿಸಿದರು.

ಮಧ್ಯಾಹ್ನ ದಫ್ ಕಮಿಟಿ ಸಭಾಂಗಣದಲ್ಲಿ ಹಾಜಿ ಪಂಡಿತ್ ಬಿ.ಎ. ಇದ್ದಿನಬ್ಬ ತೋಡಾರು ಇವರ ನೇತೃತ್ವದಲ್ಲಿ, ದಫ್ ಉಸ್ತಾದರಾದ ಜೆ.ಕೆ. ಹಸನ್ ಮುಸ್ಲಿಯಾರ್, ಹಾಜಿ ಇಸ್ಮಾಯಿಲ್ ಮುಸ್ಲಿಯಾರ್ ಸುಳ್ಯ ಇವರ ಉಪಸ್ಥಿತಿಯಲ್ಲಿ ರಿಪಾಯ್ಯೀಯಾ ದಫ್ ರಾತೀಬ್ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News