×
Ad

ಬ್ರಹ್ಮಾವರದ ನೂತನ ವಸ್ತ್ರಮಳಿಗೆ ಸತ್ಯನಾಥ ಸ್ಟೋರ್ಸ್‌ ಶುಭಾರಂಭ

Update: 2021-03-07 19:28 IST

ಬ್ರಹ್ಮಾವರ, ಮಾ.7: ಕಳೆದ ಏಳು ದಶಕಗಳಿಂದ ವಸ್ತ್ರ ವ್ಯಪಾರ ಮೂಲಕ ಕರಾವಳಿ, ಮಲೆನಾಡು ಭಾಗದ ಗ್ರಾಹಕರ ಪ್ರೀತಿಗೆ ಪಾತ್ರವಾದ ಸತ್ಯನಾಥ ಸ್ಟೋರ್ಸ್‌ ಸಂಸ್ಥೆಯ ಬ್ರಹ್ಮಾವರದ ನೂತನ ಹಾಗೂ ಬೃಹತ್ ವಸ್ತ್ರಮಳಿಗೆ ಸತ್ಯನಾಥ ಸ್ಟೋರ್ಸ್‌ ರವಿವಾರ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಉದ್ಘಾಟಿಸಿದ ಗರಿಕೆಮಠ ಶ್ರೀ ಅರ್ಕ ಮಹಾಗಣಪತಿ ದೇವಸ್ಥಾನದ ವೇದಮೂರ್ತಿ ಜಿ.ರಾಮಪ್ರಸಾದ ಅಡಿಗ ಮಾತನಾಡಿ, ಸಂಸ್ಥೆಯ ಯಶಸ್ಸಿನ ಮೂಲ ಗ್ರಾಹಕರ ಆತ್ಮತೃಪ್ತಿ ಹಾಗೂ ಸಿಬ್ಬಂದಿ ಸಂತೋಷ. ಇದರೊಂದಿಗೆ ಹಿರಿಯರ ಸಲಹೆಗಳನ್ನು ಶ್ರದ್ಧೆಯೊಂದಿಗೆ ಪಾಲಿಸಿಕೊಂಡು ಬರು ತ್ತಿರುವುದರಿಂದ ಸತ್ಯನಾಥ ಸ್ಟೋರ್ಸ್‌ ಸಂಸ್ಥೆ ಇಂದು ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದೆ. ಸತ್ಯನಾಥ ಸಂಸ್ಥೆ ಎನ್ನುವುದಕ್ಕಿಂತ, ಒಂದು ಆಲೋಚನೆ ಎನ್ನಬಹುದು ಎಂದು ಹೇಳಿದರು.

ಸಂಸ್ಥೆಯ ಮಾಲಕ ಸತ್ಯನಾಥ ಪುರುಷೊತ್ತಮ ಪೈ ಮಾತನಾಡಿ, ಗ್ರಾಹಕ ವರ್ಗ ಹಿಂದೆಯೂ ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದು, ಮುಂದೆಯೂ ಸಂಸ್ಥೆಯೊಂದಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸುಪ್ರಭ ಸತ್ಯನಾಥ ಪೈ, ಗಿರಿಧರ ಸತ್ಯನಾಥ ಪೈ, ಗೌತಮಿ ಗಿರಿಧರ ಪೈ, ಧಾತ್ರಿ ಪೈ, ರೋಹಿತ್ ನಾಯಕ್, ಶ್ರೀದೇವಿ ರೋಹಿತ್ ನಾಯಕ್, ಅಮೂಲ್ಯ ನಾಯಕ್, ಕುಂಬ್ಳೆ ವೆಂಕಟೇಶ್ ಭಟ್, ವಿದ್ಯಾ ವಿ. ಭಟ್, ಬಾಲಕೃಷ್ಣ ನಾಯಕ್, ರಾಧಿಕಾ ನಾಯಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಬ್ರಹ್ಮಾವರ ಪಟ್ಟಣದಲ್ಲಿ ಸಾಂಪ್ರದಾಯಿಕ ಮತ್ತು ಗೊಂಬೆಗಳ ಆಕರ್ಷಕ ಮೆರವಣಿಗೆ ನಡೆಯಿತು. ಸಂಜೆ ಝೀ ಟಿವಿ ಖ್ಯಾತಿ ಸರಿಗಮಪ ಸುಪ್ರಸಿದ್ಧ ಗಾಯಕರಿಂದ ಸತ್ಯನಾಥ ಗಾನವೈಭವ ಸಂಗೀತ ಕಾರ್ಯಕ್ರಮ ಜರಗಿತು.

ಇಪ್ಪತ್ತಕ್ಕೂ ಅಧಿಕ ರಾಜ್ಯಗಳ ವೈವಿಧ್ಯಮಯ ಜವಳಿ ಅಪಾರ ಸಂಗ್ರಹದ ಪರಿಪೂರ್ಣ ಮದುವೆ ಜವಳಿ ಮಳಿಗೆ ಇದಾಗಿದೆ. ಪರಿಪೂರ್ಣ ಮದುವೆ ಜವಳಿ ಸಹಿತ ಬನಾರಸ್, ಧರ್ಮಾವರಂ, ಕಾಟನ್ ಸಾರಿ, ಕಾಟನ್ ಸಿಲ್ಕ್, ಕೋಲ್ಕತ್ತಾ ಕಾಟನ್, ಕಾಂಜೀವರಂ,ಬಾಂಗ್ಲಾ ಕಾಟನ್, ಫ್ಯಾನ್ಸಿ ಡಿಸೈನರ್ ಸಾರೀಸ್, ಬ್ರೈಡಲ್ ಲೆಹಂಗಾ, ಲಾಂಗ್‌ಟಾಪ್, ಚೂಡಿದಾರ, ಕುರ್ತೀಸ್, ಮಕ್ಕಳ ಉಡುಪುಗಳು, ಮೆನ್ಸ್‌ವೇರ್, ಹ್ಯಾಂಡ್‌ಲೂಮ್ಸ್, ಬ್ರ್ಯಾಂಡೆಡ್ ಡಿಸೈನ್ ಸಾರಿ ಸಹಿತ ವಿವಿಧ ಕಂಪನಿಗಳ ಬಟ್ಟೆಗಳು ಅಪಾರ ಶ್ರೇಣಿ, ನವನವೀನ ವಿನ್ಯಾಸದೊಂದಿಗೆ ಅತ್ಯಾಕರ್ಷಕ ದರದಲ್ಲಿ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News