ಎಸ್ಡಿಟಿಯು ಮಂಗಳೂರು(ನಗರ) ದಕ್ಷಿಣ ಕ್ಷೇತ್ರ ಸಮಿತಿ ಅಸ್ಥಿತ್ವಕ್ಕೆ
Update: 2021-03-07 21:40 IST
ಮಂಗಳೂರು : ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್ಡಿಟಿಯು) ಮಂಗಳೂರು (ನಗರ) ದಕ್ಷಿಣ ಕ್ಷೇತ್ರ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಇಕ್ಬಾಲ್ ಕಣ್ಣೂರು, ಉಪಾಧ್ಯಕ್ಷರಾಗಿ ಸದಾಫ್ ಬೆಂಗರೆ, ಕಾರ್ಯದರ್ಶಿಯಾಗಿ ಅನ್ಸಾರ್ ಕುದ್ರೋಳಿ, ಜೊತೆ ಕಾರ್ಯದರ್ಶಿಯಾಗಿ ಅರ್ಷದ್ ಕುದ್ರೋಳಿ, ಕೋಶಾಧಿಕಾರಿಯಾಗಿ ಹಫೀಝ್ ಕುದ್ರೋಳಿ, ಸದಸ್ಯರಾಗಿ ಇಕ್ಬಾಲ್ ಫೈಸಲ್ ನಗರ, ಉನೈಸ್ ಬಜಾಲ್, ನಿಸಾರ್ ಬೆಂಗರೆ, ಬಶೀರ್ ಬಂದರ್ ಅವರನ್ನು ಆಯ್ಕೆಮಾಡಲಾಯಿತು.
ಆಂತರಿಕ ಚುನಾವಣೆ ಪ್ರಕ್ರಿಯೆಯನ್ನು ಎಸ್ಡಿಪಿಐ ದಕ್ಷಿಣ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಕುದ್ರೋಳಿ ಮತ್ತು ಎಸ್ಡಿಟಿಯು ಜಿಲ್ಲಾಧ್ಯಕ್ಷ ಕಾದರ್ ಫರಂಗಿಪೇಟೆ ನಡೆಸಿ ಕೊಟ್ಟರು. ಎಸ್ಡಿಟಿಯು ಜಿಲ್ಲಾ ಸಮಿತಿ ಸದಸ್ಯ ನೌಫಲ್ ಕುದ್ರೋಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.