ಸಾಹಿತ್ಯ, ಸಮಾಜಸೇವೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ಪ್ರೊ.ವೈ.ಭಾಸ್ಕರ ಶೆಟ್ಟಿ

Update: 2021-03-07 16:25 GMT

ಪಡುಬಿದ್ರಿ : ಸಾಹಿತ್ಯ ಮತ್ತು ಸಮಾಜಸೇವೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಾಹಿತ್ಯ ಮತ್ತು ಸಮಾಜ ಸೇವೆ ಜೊತೆಯಾಗಿ ಸಾಗಿದಾಗ ಸಾಂಘಿಕ ಶಕ್ತಿಯು ಬಲಿಷ್ಠವಾಗಿ ಯೋಜಿತ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸದಸ್ಯ, ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಅಭಿಪ್ರಾಯಟ್ಟರು.

ಅವರು ಶನಿವಾರ ಪಡುಬಿದ್ರಿ ಎಸ್‍ಬಿವಿಪಿ ಶಾಲೆಯಲ್ಲಿ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪಡುಬಿದ್ರಿಯಲ್ಲಿ ಜರುಗಿದ  ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ  ಸಮಿತಿಯ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಪಡುಬಿದ್ರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಮಿತಿಯ ಸಕ್ರೀಯ ಸದಸ್ಯೆ ಯಶೋದಾ ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಸುಧಾಕರ ಪೂಜಾರಿ, ಕುಸುರಿ ವಿನ್ಯಾಸದ ಮೂಲಕ ಗಮನ ಸೆಳೆದ ಕಲಾವಿದೆ ರೂಪಾ ವಸುಂಧರ ಆಚಾರ್ಯ ಪಡುಬಿದ್ರಿರವರನ್ನು ಅಭಿನಂದಿಸಿ ಮಾತನಾಡಿದರು.

ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,  ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಅನಂತ ಪಟ್ಟಾಭಿ ರಾವ್ ಶುಭಾಶಂಸನೆಗೈದರು.

ವೇದಿಕೆಯಲ್ಲಿ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಸುಮತಿ ವಿ. ಹೆಗಡೆ, ಸಮ್ಮೇಳನದ ಕಾರ್ಯದರ್ಶಿ ಕಸ್ತೂರಿ ರಾಮಚಂದ್ರ, ಪಿ.ರಾಘವೇಂದ್ರ ನಾವಡ, ಸಮಿತಿಯ ಸದಸ್ಯರಾದ ಸುದಕ್ಷಿಣೆ, ನೀಲಾನಂದ ನಾಯ್ಕ್, ಶಿವಾನಂದ ಕಾಮತ್ ಶಿರ್ವ, ಸೇವಂತಿ ಸದಾಶಿವ, ಅನಸೂಯಾ ಶೆಣೈ, ರಾಜೇಶ್ ದೇವಾಡಿಗ, ದೀಪಕ್ ದೇವಾಡಿಗ, ವೈ.ರಾಮಕೃಷ್ಣ ರಾವ್ ಎರ್ಮಾಳು  ಉಪಸ್ಥಿತರಿದ್ದರು. ತಾಲೂಕು ಕಾರ್ಯದರ್ಶಿ ವಿದ್ಯಾಧರ್ ಪುರಾಣಿಕ್ ಧನ್ಯವಾದವಿತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News