ರಾಮ-ಲಕ್ಷಣ ಜೋಡುಕರೆ ಕಂಬಳ ಕೂಟ ಫಲಿತಾಂಶ ಪ್ರಕಟ

Update: 2021-03-07 16:50 GMT

ಮಂಗಳೂರು : ನಗರದ ಬಂಗ್ರಕೂಳೂರು ಗೋಲ್ಡ್‌ಫಿಂಚ್ ಸಿಟಿ ಮೈದಾನದಲ್ಲಿ ಜರುಗಿದ ರಾಮ - ಲಕ್ಷಣ ಜೋಡುಕರೆ ಕಂಬಳ ಕೂಟ ರವಿವಾರ ಸಂಪನ್ನಗೊಂಡಿತು. ಸಹಸ್ರಾರು ನಗರ ವಾಸಿಗಳಿಗೆ ಕಂಬಳದ ಕಂಪನ್ನು ಉಣಬಡಿಸಿದೆ. ಈ ಬಾರಿಯ ಕಂಬಳದಲ್ಲಿ ಒಟ್ಟು 154 ಜೊತೆ ಕೋಣಗಳು ಭಾಗವಹಿಸಿದ್ದವು.

ಕನೆಹಲಗೆ ವಿಭಾಗದಲ್ಲಿ 4 ಜೊತೆ, ಅಡ್ಡಹಲಗೆ 7 ಜೊತೆ, ಹಗ್ಗ ಹಿರಿಯ 17 ಜೊತೆ, ನೇಗಿಲು ಹಿರಿಯ 27 ಜೊತೆ, ಹಗ್ಗ ಕಿರಿಯ 18 ಜೊತೆ, ನೇಗಿಲು ಕಿರಿಯ 81 ಜೊತೆ ಕೋಣಗಳು ಭಾಗವಹಿಸಿದ್ದವು.

ಕನೆಹಲಗೆ: ಪ್ರಥಮ ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್. ಹಲಗೆ ಮುಟ್ಟಿದವರು-ಬೈಂದೂರು ರಾಘವೇಂದ್ರ ಪೂಜಾರಿ. ದ್ವಿತೀಯ ವಾಮಂಜೂರು ತಿರುವೈಲುಗುತ್ತು ಅಭಯ್ ನವೀನ್ಚಂದ್ರ ಆಳ್ವ.

ಹಲಗೆ ಮುಟ್ಟಿದವರು- ಬೈಂದೂರು ಭಾಸ್ಕರ ದೇವಾಡಿಗ. ತೃತೀಯ ಬಾರ್ಕೂರು ಶಾಂತಾರಾಮ ಶೆಟ್ಟಿ. ಹಲಗೆ ಮುಟ್ಟಿದವರು- ಮಂದಾರ್ತಿ ಶಿರೂರು ಗೋಪಾಲ ನಾಯ್ಕ್

ಅಡ್ಡ ಹಲಗೆ: ಪ್ರಥಮ ಮೇರಮಜಲ್ ಮಿಶನ್ ಗಾಡ್ವಿನ್ ವಾಸ್. ಹಲಗೆ ಮುಟ್ಟಿದವರು-ಬೈಂದೂರು ಹೊಸಮನೆ ಮಹೇಶ್ ಪೂಜಾರಿ. ದ್ವಿತೀಯ ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ. ಹಲಗೆ ಮುಟ್ಟಿದವರು-ಬಂಗಾಡಿ ಕುದ್ಮನ್ ಲೋಕಯ್ಯ ಗೌಡ.

ಹಗ್ಗ ಹಿರಿಯ: ಪ್ರಥಮ ಮಾಳ ಆನಂದ ನಿಲಯ ಶೇಖರ ಎ.ಶೆಟ್ಟಿ ಬಿ. ಓಡಿಸಿದವರು-ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ. ದ್ವಿತೀಯ ಪದವು ಕಾನಡ್ಕ ಫ್ಲೇವಿ ಡೆರ್ರಿಕ್ ಡಿಸೋಜ ಎ. ಓಡಿಸಿದವರು- ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ.

ಹಗ್ಗ ಕಿರಿಯ: ಪ್ರಥಮ ಜಪ್ಪು ಮನ್ಕುತೋಟ ಗುತ್ತು ಸಾಚಿ ಅನಿಲ್ ಶೆಟ್ಟಿ. ಓಡಿಸಿದವರು-ಪಣಪಿಲ ಪ್ರವೀಣ್ ಕೋಟ್ಯಾನ್. ದ್ವಿತೀಯ ಸಾಣೂರು ಸೇನರಬೆಟ್ಟು ಜಗದೀಶ್ ಪೂಜಾರಿ ಎ. ಓಡಿಸಿದವರು-ಬೈಂದೂರು ವಿವೇಕ್.

ನೇಗಿಲು ಹಿರಿಯ: ಪ್ರಥಮ ಮುಲ್ಕಿ ತೋಕೂರುಗುತ್ತು ಹೊಸಮನೆ ಶಮ್ಮಿ ಶಿವಪ್ರಸಾದ್ ಶೆಟ್ಟಿ. ಓಡಿಸಿದವರು-ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ. ದ್ವಿತೀಯ ಇರುವೈಲು ಪಾನಿಲ ಬಾಡ ಪೂಜಾರಿ ಬಿ. ಓಡಿಸಿದವರು: ಬೈಂದೂರು ವಿವೇಕ್.

ನೇಗಿಲು ಕಿರಿಯ: ಪ್ರಥಮ ಶಿರ್ತಾಡಿ ದುರ್ಗಾ ನಿವಾಸ ಕಾರ್ತಿಕ್ ಪೂಜಾರಿ. ಓಡಿಸಿದವರು-ಮಾಂಟ್ರಾಡಿ ರಾಜೇಶ್ ಆಚಾರ್ಯ. ದ್ವಿತೀಯ-ಕಾರಿಂಜ ಕೊಂಬೆಲ್ ಗುತ್ತು ಜಾರಪ್ಪ ಪ್ರಶಾಂತ್ ಪೂಜಾರಿ. ಓಡಿಸಿದವರು-ಬಂಗಾಡಿ ಹಮೀದ್.

ಬಜಗೋಳಿಯ ನಿಶಾಂತ್ ಶೆಟ್ಟಿ ಯಿಂದ ಕೂಟ ದಾಖಲೆ (9.19 ಸೆ)

ನಗರದ ಬಂಗ್ರ ಕೂಳೂರು ಗೋಲ್ಡ್  ಪಿಂಚ್  ಸಿಟಿಯಲ್ಲಿ ಶನಿವಾರ ಆರಂಭ ಗೊಂಡ ರಾಮ -ಲಕ್ಷ್ಮಣ ಜೋಡು ಕರೆ ಕಂಬಳದಲ್ಲಿ 155 ಜೊತೆ ಓಟದ ಕೋಣಗಳು ಭಾಗವಹಿಸಿದ್ದ ಮಂಗಳೂರು ಕಂಬಳ ರವಿವಾರ ಸಂಜೆ ಸಮಾಪನಗೊಂಡಿದೆ. ಈ ಕೂಟದಲ್ಲಿ ಬಜಗೋಳಿಯ ನಿಶಾಂತ್ ಶೆಟ್ಟಿ ನೂರು ಮೀಟರ್ ದೂರವನ್ನು ಹಗ್ಗದ ಹಿರಿಯ ವಿಭಾಗದಲ್ಲಿ 9.19 ಸೆಕೆಂಡುಗಳಲ್ಲಿ ಕ್ರಮಿಸಿ ಕೂಟದ ದಾಖಲೆ ನಿರ್ಮಿಸಿದ್ದಾರೆ.(ಅವರು ಈ ಕಂಬಳದ ಒಟ್ಟು 125 ಮೀಟರ್ ದೂರವನ್ನು ಓಟದ ಕೋಣಗಳ ಹಗ್ಗ ಹಿರಿಯ ವಿಭಾಗದ ಲ್ಲಿ  11.49 ಸೆಕೆಂಡ್ ಗಳಲ್ಲಿ ಕ್ರಮಿಸಿ ವಿಶೇಷ ಕೂಟ ದಾಖಲೆ ನಿರ್ಮಿಸಿದ್ದಾರೆ)

ಕಂಬಳ ಫಲಿತಾಂಶ :-  ಹಗ್ಗ ಹಿರಿಯ ವಿಭಾಗದಲ್ಲಿ  17 ಜೊತೆ ಕೋಣಗಳು ಭಾಗವಹಿಸಿದ್ದು, ಅಂತಿಮ ಸುತ್ತಿನಲ್ಲಿ ಮಾಳ ಆನಂದ ನಿಲಯ ಶೇಖರ ಶೆಟ್ಟಿಯವರ ಕೋಣಗಳನ್ನು ಮಿಜಾರು ಅಶ್ವಥ ಪುರದ ವೇಗದ ಓಟಗಾರ ಶ್ರೀ ನಿವಾಸ ಗೌಡ 12.64. ಸೆಕೆಂಡುಗಳಲ್ಲಿ 125 ಮೀಟರ್ ದೂರ  ಓಡಿಸಿ ಪ್ರಥಮ ಸ್ಥಾನ ಪಡೆದರು.ಪದವು ಕಾನಡ್ಕ ಪ್ಲೇವಿ ಡಿ ಸೋಜ ಅವರ ಕೋಣಗಳನ್ನು ಓಡಿಸಿ ಇನ್ನೊರ್ವ ಕಂಬಳ ದ ವೇಗದ ಓಟಗಾರ ಬಜಗೋಳಿ ನಿಶಾಂತ್ ಶೆಟ್ಟಿ ಅಂತಿಮ ಸುತ್ತಿನಲ್ಲಿ 12.91 ಸೆಕೆಂಡುಗಳಲ್ಲಿ ಓಡಿ ದ್ವಿತೀಯ ಸ್ಥಾನ ಪಡೆದರು.

ಹಗ್ಗ ಕಿರಿಯ ವಿಭಾಗದಲ್ಲಿ 18 ಜೊತೆ ಕೋಣಗಳ ಓಟದಲ್ಲಿ ಜಪ್ಪು ಮುನ್ಕು ತೋಟಗುತ್ತು ಸಾಚಿ ಅನಿಲ್ ಶೆಟ್ಟಿ ಯವರ ಕೋಣಗಳನ್ನು ಪಣಪೀಲು ಪ್ರವೀಣ್ ಕೋಟ್ಯಾನ್ ಓಡಿಸಿ ಪ್ರಥಮ ಹಾಗೂ ಸಾಣೂರು ಸೇನೆರ ಬೆಟ್ಟು ಜಗದೀಶ್ ಪೂಜಾರಿಯವರ ಕೋಣಗಳನ್ನು ಬೈಂದೂರು ವಿವೇಕ್ ಓಡಿದಿ ದ್ವೀತಿಯ ಬಹುಮಾನ ಪಡೆದರು.

ಕನಹಲಗೆಯ ವಿಭಾಗದಲ್ಲಿ ಒಟ್ಟು 5ಜೊತೆ ಕೋಣಗಳಿದ್ದು ಈ ಪೈಕಿ  ಆರೂವರೆ ಅಡಿ ನಿಶಾನೆಗೆ ನೀರು ಹಾಯಿಸಿದ ಬೊಳ್ಳಂಬಳ್ಳಿ ಶ್ರೀ ರಾಮ ಚೈತ್ರ ಪರಮೇಶ್ವರ ಭಟ್ ರ ಕೋಣಗಳನ್ನು ಓಡಿಸಿದ ಬೈಂದೂರು ರಾಘವೇಂದ್ರ ಪೂಜಾರಿ,ವಾಮಂಜೂರು ತಿರುವೈಲು ಗುತ್ತು ಅಭಯ ನವೀನ್ ಚಂದ್ರ ಆಳ್ವ ರ ಕೋಣಗಳನ್ನು ಓಡಿಸಿದ ಬೈಂದೂರು ಭಾಸ್ಕರ ದೇವಾಡಿಗ, ಬಾರಕೂರು ಶಾಂತರಾಮ ಶೆಟ್ಟಿ ಯವರ ಕೋಣಗಳನ್ನು ಓಡಿಸಿದ ಮಂದಾರ್ತಿ ಶಿರೂರು ಗೋಪಾಲ ನಾಯ್ಕ ಪ್ರಶಸ್ತಿ ಗೆ ಪಾತ್ರರಾದರು.

ಅಡ್ಡ ಹಲಗೆ ವಿಭಾಗದಲ್ಲಿ 7 ಜೊತೆ ಕೋಣಗಳು ಸ್ಪರ್ಧಾ ಕಣದಲ್ಲಿದ್ದು ಮೇರ ಮಜಲು ಮಿಶನ್ ಗಾಡ್ವಿನ್  ವಾಝ್ ರ ಕೋಣಗಳನ್ನು ಬೊಳ್ಳಂಬಳ್ಳಿ ಮಹೇಶ್ ಓಡಿಸಿ ಪ್ರಥಮ ಮತ್ತು ಪಾತಿಲಾ ಹೊಸ ಮನೆ ರವಿರಾಜ ಶೆಟ್ಟಿ ಯವರ ಕೋಣಗಳನ್ನು ಬಂಗಾಡಿ ಕುದ್ಮಾನ್ ಲೋಕಯ್ಯ ಗೌಡ ಓಡಿಸಿ ದ್ವಿತೀಯ ಬಹುಮಾನ ಪಡೆದರು.

ನೇಗಿಲು ಹಿರಿಯ ವಿಭಾಗದಲ್ಲಿ ಮುಲ್ಕಿ ತೋಕೋರು ಗುತ್ತು ಹೊಸಮನೆ ಶಮ್ಮಿ ಶಿವಪ್ರಸಾದ್ ಶೆಟ್ಟಿ ಯವರ ಕೋಣಗಳನ್ನು ಬಜಗೋಳಿ ನಿಶಾಂತ್ ಶೆಟ್ಟಿ ಯವರು ಓಡಿಸಿ ಪ್ರಥಮ ಸ್ಥಾನವನ್ನು, ಇರುವೈಲುಪಾಣಿಲ ಬಾಡ ಪೂಜಾರಿ ಯವರ ಕೋಣಗಳನ್ನು ಬೈಂದೂರು ವಿವೇಕ್ ಓಡಿಸಿ ದ್ವಿತೀಯ ಸ್ಥಾನ ವನ್ನು ಪಡೆದುಕೊಂಡರು.

ನೇಗಿಲು ಕಿರಿಯ ವಿಭಾಗದಲ್ಲಿ 81 ಜೊತೆ ಕೋಣಗಳು ಸ್ಪರ್ಧಿಸಿದ್ದು,ಶಿರ್ತಾಡಿ ಶ್ರೀ ದುರ್ಗಾ ನಿವಾಸದ ಕಾರ್ತಿಕ್ ಪೂಜಾರಿಯವರ ಕೋಣ ಗಳನ್ನು ಮಾಂಟ್ರಾಡಿ ರಾಜೇಶ್ ಓಡಿಸಿ ಪ್ರಥಮ ಸ್ಥಾನ ಮತ್ತು ಕಾರಿಂಜ ಕೊಂಬೋಲು ಗುತ್ತು ಪ್ರಶಾಂತ್ ಜಾರಪ್ಪ ಪೂಜಾರಿಯವರ  ಕೋಣಗಳನ್ನು ಬಂಗಾಡಿ ಹಮೀದ್ ಅವರು ಓಡಿಸಿ ದ್ವಿತೀಯ ಬಹುಮಾನ ಪಡೆದರು.

ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ.ಬ್ರಿಜೇಶ್ ಚೌಟ ಕಂಬಳ ಸಮಿತಿಯ ಪದಾಧಿಕಾರಿಗಳು ಗಣ್ಯರೊಂದಿಗೆ ವಿಜೇತರಿಗೆ ಬಹುಮಾನ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News