ಪಾಕ್: ನಿರ್ಬಂಧ ಸಡಿಲಿಕೆ ಬಳಿಕ ಕೋವಿಡ್-19 ಪ್ರಕರಣಗಳಲ್ಲಿ ಶೇ.50 ಏರಿಕೆ

Update: 2021-03-07 17:02 GMT

ಇಸ್ಲಾಮಾಬಾದ್, ಮಾ.7: ಕೊರೋನ ಹಾವಳಿಯ ಹಿನ್ನೆಲೆಯಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಕಳೆದ ತಿಂಗಳು ಸಡಿಲಗೊಳಿಸಿದ ಬಳಿಕ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಶೇ.50ರಷ್ಟು ಏರಿಕೆಯಾಗಿದೆಯೆಂದು ಡಾನ್ ಪತ್ರಿಕೆ ವರದಿ ಮಾಡಿದೆ.

 ಶನಿವಾರದಂದು 1,714 ಮಂದಿಗೆ ಕೊರೋನ ಸೋಂಕು ತಗಲಿದ್ದು, ಇದರೊಂದಿಗೆ ಪಾಕಿಸ್ತಾನದಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ 5,90,598ಕ್ಕೇರಿದೆ.

ಶನಿವಾರ ಒಂದೇ ದಿನದಲ್ಲಿ 38 ಮಂದಿ ಕೊರೋನದಿಂದಾಗಿ ಮೃತಪಟ್ಟಿದ್ದಾರೆ ಮತ್ತು ಸಕ್ರಿಯ ಸೋಂಕಿನ ಪ್ರಕರಣಗಳ ಸಂಖ್ಯೆ 17,352ಕ್ಕೇರಿದೆ ಎಂದು ವರದಿ ಹೇಳಿದೆ.

 ಪಾಕಿಸ್ತಾನದ ನ್ಯಾಶನಲ್ ಕಮಾಂಡ್ ಆ್ಯಂಡ್ ಆಪರೇಶನ್ ಸೆಂಟರ್ (ಎನ್‌ಸಿಓಸಿ) ಬಿಡುಗಡೆಗೊಳಿಸಿರುವ ದತ್ತಾಂಶಗಳ ಪ್ರಕಾರ ಫೆಬ್ರವರಿ 27ರಂದು 1,176 ಪ್ರಕರಣಗಳು ದಾಖಲಾಗಿದ್ದರೆ, ಮಾರ್ಚ್ 1ರಂದು 1,163 ಪ್ರಕರಣ ವರದಿಯಾಗಿತ್ತು. ಆದರೆ ಸೋಂಕಿತರ ಸಂಖ್ಯೆಯು ಮಾರ್ಚ್ 2ರಂದು ಹಠಾತ್ ಏರಿಕೆಯಾಗಿದ್ದು, 1,388 ಪ್ರಕರಣಗಳು ವರದಿಯಾಗಿದ್ದವು. ಅದೇ ರೀತಿ ಮಾರ್ಚ್ 4ರಂದು 1,519 ಪ್ರಕರಣ ವರದಿಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News