ವಿಜಯ್ ಹಝಾರೆ ಟ್ರೋಫಿ: ದಿಲ್ಲಿ ಕ್ವಾರ್ಟರ್ ಫೆನಲ್‌ಗೆ

Update: 2021-03-08 05:15 GMT

 ಹೊಸದಿಲ್ಲಿ:ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್‌ಪಂದ್ಯದಲ್ಲಿ ಉತ್ತರಾಖಂಡ ತಂಡವನ್ನು ಮಣಿಸಿದ ದಿಲ್ಲಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

 ಅನುಜ್ ರಾವತ್ 85 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 95 ರನ್ ಗಳಿಸಿ ದಿಲ್ಲಿ ತಂಡದ ಗೆಲುವಿಗೆ ನೆರವಾದರು.

ಸೋಮವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದಿಲ್ಲಿ ತಂಡವು ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ.

 ಮೊದಲು ಬ್ಯಾಟಿಂಗ್ ಮಾಡಿದ ಉತ್ತರಾಖಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 287 ರನ್ ಗಳಿಸಿತ್ತು. ಓಪನರ್ ಕಮಲ್ ಸಿಂಗ್ 83 ಎಸೆತಗಳಲ್ಲಿ 77 ರನ್ ಗಳಿಸಿದರು. ರಣಜಿ ಟ್ರೋಫಿ ದಿಲ್ಲಿ ತಂಡದ ಮಾಜಿ ಆರಂಭಿಕ ಆಟಗಾರ ಮತ್ತು ಹಾಲಿ ಉತ್ತರಾಖಂಡ ತಂಡದ ನಾಯಕ ಕುನಾಲ್ ಚಂಡೇಲಾ 83 ಎಸೆತಗಳಲ್ಲಿ 62 ರನ್ ಗಳಿಸಿದರು.

 ಇದಕ್ಕೆ ಉತ್ತರಿಸಿದ ದಿಲ್ಲಿ 48.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 289 ರನ್ ಗಳಿಸುವ ಮೂಲಕ ಗೆಲುವಿನ ದಡ ತಲುಪಿತು.

► ಸಂಕ್ಷಿಪ್ತ ಸ್ಕೋರ್:

► ಉತ್ತರಾಖಂಡ 50 ಓವರ್‌ಗಳಲ್ಲಿ 287/8: (ಕಮಲ್ ಸಿಂಗ್ 77, ಕುನಾಲ್ ಚಂಡೇಲಾ 62, ಪ್ರದೀಪ್ ಸಾಂಗ್ವಾನ್ 59ಕ್ಕೆ 3, ನಿತೀಶ್ ರಾಣಾ 40ಕ್ಕೆ 2)

► ದಿಲ್ಲಿ 48.3 ಓವರ್‌ಗಳಲ್ಲಿ 289/6: (ರಾಣಾ 81, ಅನುಜ್ ರಾವತ್ ಔಟಾಗದೆ 95 ರನ್, ಪ್ರದೀಪ್ ಸಾಂಗ್ವಾನ್ ಔಟಾಗದೆ 58, ಸಮದ್ ಫಲ್ಲಾ 6ಕ್ಕೆ 2)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News