ದೀನ ದಲಿತರ, ಬಡವರ ಪರ ಧ್ವನಿಯಾದರೆ ಜೀವನ ಸಾರ್ಥಕ: ಅಭಯಚಂದ್ರ ಜೈನ್

Update: 2021-03-08 06:29 GMT

ಮುಲ್ಕಿ: ಎಲ್ಲಾ ಧರ್ಮಗಳನ್ನು ಪ್ರೀತಿಸುವ ದೇಶ ಭಾರತವಾಗಿದ್ದು,  ದೇಶದ ಪುಣ್ಯಭೂಮಿಯಲ್ಲಿ ಐಕ್ಯತೆಯಿಂದ ಸಹೋದರತೆಯಿಂದ ಜೀವಿಸಿ ದೀನದಲಿತರ, ಬಡವರ ಪರ ಧ್ವನಿ ಆಗಿದ್ದುಕೊಂಡು ಮಾನವರಾಗಲು ಪ್ರಯತ್ನಿಸಿದರೆ ಜೀವನ ಸಾರ್ಥಕ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್  ಹೇಳಿದರು.

ಅವರು ಹಝ್ರತ್ ಸಾದತ್ ವೃದ್ಧಾಶ್ರಮ ಕೋಟೆ ಮಲ್ಲಾರು ಕಾಪು ವತಿಯಿಂದ ಮಸೀದಿ ನಿರ್ಮಾಣ ಸಹಾಯಕ್ಕಾಗಿ ಮುಲ್ಕಿಯ ಕಾರ್ನಾಡ್ ಗಾಂಧಿ ಮೈದಾನದಲ್ಲಿ ಏಕದಿನ ಮತಪ್ರಭಾಷಣದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಮಾರಂಭವನ್ನು ಬೊಳ್ಳೂರು ಉಸ್ತಾದ್ ಅಲ್ ಹಜ್ ಅಝಹರ್ ಫೈಝಿ ಉದ್ಘಾಟಿಸಿದರು. ಉತ್ತರಪ್ರದೇಶ ಮಕ್ಕಾನ್ ಪುರ  ಅಸೈಯದ್ ಶೈಖ್ ಮುಜೀಬುಲ್ ಬಾಖಿ ಮದಾರಿ ದುವಾ ನೇತೃತ್ವವಹಿಸಿ ಪ್ರವಚನ ನೀಡಿ ಪರೋಪಕಾರವೇ ಮನೋಧರ್ಮ ವಾಗಿದ್ದು ಸಹಾಯ ಹಸ್ತ ನೀಡುವ ಮುಖಾಂತರ ಬಡವರ ಪಾಲಿಗೆ ಬೆಳಕಾಗೋಣ ಎಂದರು.

ಮುಲ್ಕಿ ಕೇಂದ್ರ ಜುಮಾ ಮಸೀದಿಯ ಖತೀಬ್ ಎಸ್ ಬಿ ಮಹಮ್ಮದ್ ದಾರಿಮಿ ಸಂದೇಶ ಭಾಷಣ ನೀಡಿದರು. ಮುಖ್ಯ ಪ್ರಭಾಷಣಕಾರರಾಗಿ ಕೇರಳ ಚಿರಂಗೀಝ್ ಸ್ನೇಹಸಾಗರ ಫೌಂಡೇಶನ್ ನ ಅಧ್ಯಕ್ಷರಾದ ಎಎಂ ನೌಶಾದ್ ಬಾಖವಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮೌಲಾನಾ ದಾನಿಶ್ ರಝಾರಜ್ವಿ ,ಮುಲ್ಕಿ ನ. ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮುಲ್ಕಿ ನಪಂ ಸದಸ್ಯ ಪುತ್ತುಬಾವ, ಮುಲ್ಕಿ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷರಾದ ಬಿಎಂ ಲಿಯಾಖತ್ ಆಲಿ, ಎಚ್ ವಸಂತ ಬೆರ್ನಾಡ್ ಹಳೆಯಂಗಡಿ, ಗೋಪಿನಾಥ ಪಡಂಗ, ಇಕ್ಬಾಲ್ ಮುಲ್ಕಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ವಿವಿಧ ಮಸೀದಿಗಳ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷರಾದ ಕೆ. ಶಾಹುಲ್ ಹಮೀದ್ ಕದಿಕೆ ಸ್ವಾಗತಿಸಿದರು. ಸಂಚಾಲಕ ಇಕ್ಬಾಲ್ ಬಾಳಿಲ ಪ್ರಸ್ತಾವನೆಗೈದರು. ಮಹಮದ್ ಮದಾರಿ ಕೆರೆಕಾಡು ಧನ್ಯವಾದ ಅರ್ಪಿಸಿದರು. ಇರ್ಷಾದ್ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News