ಕರಕುಶಲಗಳು ದೇಶದ ಸಂಸ್ಕೃತಿಯ ಪ್ರತೀಕ : ಚಂದ್ರಶೇಖರ ಸ್ವಾಮೀಜಿ

Update: 2021-03-08 06:48 GMT

ಬೆಂಗಳೂರು: ರಾಜ್ಯದ ಕರಕುಶಲ ಕಲೆಗಳು ನಮ್ಮ ಸಂಸ್ಕೃತಿಯ ಪ್ರತೀಕ.  ಅವುಗಳನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ನಿಗಮದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಅವರ ಕಾರ‍್ಯಶ್ಲಾಘನೀಯ ಎಂದು ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಕಚೇರಿಗೆ ಭೇಟಿ ನೀಡಿ, ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಅವರೊಂದಿಗೆ ಸಮಾಲೋಚನೆ ಬಳಿಕ ಹೇಳಿದರು.

ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಅವರು ನಿಗಮ ಅಧ್ಯಕ್ಷರಾದ ಬಳಿಕ ನಿಗಮವನ್ನು ಅತ್ಯಂತ ಸಕ್ರೀಯಗೊಳಿಸಿದ್ದಾರೆ. ಅವರ ಜನಪರ ಕಾರ್ಯಕ್ರಮಗಳು, ದೂರಗಾಮಿ ಯೋಜನೆಗಳು  ಹಾಗೂ ಯೋಚನೆ ಬಹಳ ಮಹತ್ವಕಾಂಕ್ಷೆಯಾಗಿದ್ದು, ಅತೀ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿ ಎಂದು ಹಾರೈಸಿದರು.

ರಾಜ್ಯ, ಕರಕುಶಲ ಕರ್ಮಿಗಳ ಶೇಯೋಭಿವೃದ್ಧಿಗೆ ಕೈಕೊಂಡ ಯೋಜನೆ, ಯೋಚನೆಗಳನ್ನು ಸ್ವಾಮೀಜಿ ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು.
ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಅವರು ಸ್ವಾಮೀಜಿಗಳನ್ನು ಸಂಸ್ಥೆಯ ಪರವಾಗಿ ವಿಶೇಷವಾಗಿ ಶಾಲು ಹೊದಿಸಿ ಫಲವಸ್ತು ನೀಡಿ ಗೌರವಿಸಿ ಆಶೀರ್ವಾದ ಪಡೆದರು.

ಸ್ವಾಮೀಜಿ ಅವರು ತಿರುಪತಿಯ ವಿಶೇಷ ಪ್ರಸಾದ ನೀಡಿ  ಅಧ್ಯಕ್ಷರನ್ನು ಶಾಲು ಹೊದಿಸಿ ಗೌರವಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ವರ್ಗದ ಅಧಿಕಾರಿ ಗಳು ಪಾಲ್ಗೊಂಡಿದ್ದರು. ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ ಭಟ್, ರಾಹುಲ್ ಸಿ.ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News