ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿಯಿಂದ ಲೀಡ್ -21 ಕಾರ್ಯಾಗಾರ

Update: 2021-03-08 07:53 GMT

ಮಂಗಳೂರು : ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯಿಂದ ಲೀಡ್ -21 ಕಾರ್ಯಾಗಾರವು ವೆಸ್ಟ್ ಜಿಲ್ಲಾಧ್ಯಕ್ಷರಾದ ಮುನೀರ್ ಅಹ್ಮದ್ ಸಖಾಫಿ ಉಳ್ಳಾಲ  ಅಧ್ಯಕ್ಷತೆಯಲ್ಲಿ ಗೂಡಿನಬಳಿಯ ಸಮುದಾಯದ ಭವನದಲ್ಲಿ ನಡೆಯಿತು.

ವೆಸ್ಟ್ ಜಿಲ್ಲಾ ಮೀಡಿಯಾ ಕಾರ್ಯದರ್ಶಿ ಝೈನುಲ್ ಆಬಿದ್ ನಈಮಿ ಕಟ್ಟತ್ತಿಲ ದುಆ ಮೂಲಕ ಚಾಲನೆ ನೀಡಿದರು. ಜಿಲ್ಲಾ QD ಕಾರ್ಯದರ್ಶಿ ಇಬ್ರಾಹಿಂ ಅಹ್ಸನಿ ಮಂಜನಾಡಿ ಉದ್ಘಾಟಿಸಿದರು. 

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ವಿವಿಧ ಹೊಣೆಗಾರಿಕೆಗಳ ಕಾರ್ಯಾಚರಣೆಯ ಬಗ್ಗೆ ವಿವರಿಸಿದರು. SYS ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಉಸ್ತಾದ್ ನಾಯಕರಿಗಿರಬೇಕಾದ ಗುಣಗಳ ಬಗ್ಗೆ ತರಗತಿ ಮಂಡಿಸಿದರು. ರಾಜ್ಯ ಕಾರ್ಯದರ್ಶಿ ಹುಸೈನ್ ಸ ಅ ದಿ ಹೊಸ್ಮಾರ್ ಇಶಾರ ಚಂದಾಭಿಯಾನದ ಬಗ್ಗೆ ಡಿವಿಷನ್ ಹಾಗೂ ಸೆಕ್ಟರ್ ನಾಯಕರಿಗೆ ಮಾಹಿತಿ ಹಂಚಿದರು. ಸಭೆಯಲ್ಲಿ ಇಶಾರ ಅಭಿಯಾನದ ಪೋಸ್ಟರ್ ಪ್ರದರ್ಶನ ಮಾಡಲಾಯಿತು.

ಈ ಸಂದರ್ಭದಲ್ಲಿ ಕೆಸಿಎಫ್ ನಾಯಕರಾದ ಆಸಿಫ್ ಹಾಜಿ ಗೂಡಿನಬಳಿ ಹಾಗೂ  ಬಂಟ್ವಾಳ ಡಿವಿಷನ್ ಮಾಜಿ ನಾಯಕರಾದ  ಹಂಝ ಮಂಚಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೈದರಾಲಿ ಕಾಟಿಪಳ್ಳ ಸ್ವಾಗತಿಸಿ, ಜಿಲ್ಲಾ ರೈನ್ಬೋ  ಕಾರ್ಯದರ್ಶಿ ಮನ್ಸೂರ್ ಬಜಾಲ್  ವಂದಿಸಿದರು. ಕಾರ್ಯಕ್ರಮವನ್ನು ಕ್ಯಾಂಪಸ್ ಕಾರ್ಯದರ್ಶಿ ಝುಹೈರ್ ಮಾಸ್ಟರ್ ಬಜ್ಪೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News