ಬಿಜೆಪಿ ಸೇರಿದ ಬಳಿಕ ಸಾಮಾಜಿಕ ತಾಣದಲ್ಲಿ ನಗಪಾಟಲಿಗೀಡಾಗುತ್ತಿರುವ ಮಿಥುನ್‌ ಚಕ್ರವರ್ತಿ

Update: 2021-03-08 11:57 GMT

ಕೋಲ್ಕತ್ತ: ಖ್ಯಾತ ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ರ್ಯಾಲಿಯಲ್ಲಿ  ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಪಕ್ಷದ ಧ್ವಜವನ್ನು ಹಿಡಿದು ವೇದಿಕೆಯಲ್ಲಿ ನಿಂತಿರುವ ಫೋಟೊ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿತ್ತು. ಈ ಹಿಂದೆ ಟಿಎಂಸಿ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿದ್ದು, ಇದೀಗ ತಮ್ಮ ಮೇಲೆ ಆರೋಪಗಳು ಕೇಳಿ ಬರುತ್ತಿದ್ದಂತೆಯೇ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಕುರಿತು ಸಾಮಾಜಿಕ ತಾಣದಾದ್ಯಂತ ಮಿಥುನ್ ಚಕ್ರವರ್ತಿ ನಗೆಪಾಟಲಿಗೀಡಾಗಿದ್ದಾರೆ.

ಈ ಹಿಂದೆ ಅತ್ಯಾಚಾರ ಪ್ರಕರಣ, ಶಾರದಾ ಚಿಟ್ ಫಂಡ್ ಹಗರಣ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಮಿಥುನ್ ಚಕ್ರವರ್ತಿ ಹೆಸರು ಕೇಳಿ ಬಂದಿತ್ತು. ಈ ಆರೋಪಗಳಿಂದ ಮುಕ್ತಗೊಳ್ಳುವ ಸಲುವಾಗಿ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆಂದು ಬಳಕೆದಾರರೋರ್ವರು ಟ್ವೀಟ್ ಮಾಡಿದ್ದಾರೆ. "ಅವರನ್ನು ಆದಾಯ ತೆರಿಗೆ ಇಲಾಖೆಯ ದಾಳಿಯ ಕುರಿತಾದಂತೆ ಬೆದರಿಸಿ ಬಿಜೆಪಿಗೆ ಸೇರ್ಪಡೆ ಮಾಡಲಾಗಿದೆ ಎಂದು ಇನ್ನೋರ್ವ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಮಿಥುನ್ ಚಕ್ರವರ್ತಿ ಈ ಹಿಂದೆ ಮಾಡಿದ್ದ ಭಾಷಣಗಳು, ಅವರ ಸಿನಿಮಾದ ದೃಶ್ಯಗಳು ಸದ್ಯ ಸಾಮಾಜಿಕ ತಾಣದಾದ್ಯಂತ ಟ್ರೋಲ್ ಗೆ ಗುರಿಯಾಗಿದೆ. "ಮಿಥುನ್ ಚಕ್ರವರ್ತಿ ಬಿಜೆಪಿ ಸೇರಿರುವುದರಿಂದ ಯಾವುದೇ ಲಾಭವಿಲ್ಲ. ಈಗಾಗಲೇ ಅವರು ನಾಲ್ಕು ಪಕ್ಷಗಳನ್ನು ಬದಲಿಸಿಕೊಂಡಿದ್ದಾರೆ. ಅವರು ನಿನ್ನೆಗಳ ಹೀರೋ ಹೊರತು ಇಂದಿನ ಹೀರೋ ಅಲ್ಲ ಎಂದು ಟಿಎಂಸಿಯ ಸುಗತ ರಾಯ್ ಮಾಧ್ಯಮಗಳಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News