ಮಂಗಳೂರು : ಎ.ಜೆ. ಆಸ್ಪತ್ರೆಯಲ್ಲಿ 'ವೆಲ್ ವಿಮೆನ್ ಪ್ರೋಗ್ರಾಂ' ಪ್ರಾರಂಭ

Update: 2021-03-08 12:01 GMT

ಮಂಗಳೂರು : ಎ.ಜೆ. ಆಸ್ಪತ್ರೆಯಲ್ಲಿ ಇದೀಗ ಎಲ್ಲ ವಯೋಮಾನದ ಮಹಿಳೆಯರ ಆರೋಗ್ಯ ಅಗತ್ಯಗಳನ್ನು ಪೂರೈಸಲು 'ವೆಲ್ ವಿಮೆನ್ ಪ್ರೋಗ್ರಾಂ'  ಸೋಮವಾರ ಪ್ರಾರಂಭಿಸಿದೆ.

ಡಾ. ಅಮಿತ ಮಾರ್ಲ, ವೈದ್ಯಕೀಯ ಆಡಳಿತ ನಿರ್ದೇಶಕಿ, ಡಾ. ವ್ರಂದಾ ಶೆಟ್ಟಿ ಸ್ರೀರೋಗ ತಜ್ಞೆ, ಡಾ. ಕವಿತಾ ಆಂಕೊಲಾಜಿಸ್ಟ್, ಡಾ. ಶಾಂತಿ ಕಾಮತ್, ಡಾ. ಸ್ವಾತಿ ರೈ-ಮ್ಯಾನೇಜರ್ ಆಪರೇಶನ್ಸ್, ವೈಧ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ, ಗ್ರೇಸಿ ಡಿಸಿಲ್ವಾ ನರ್ಸಿಂಗ್ ಅಧೀಕ್ಷಕರು, ಶೆಲ್ಲಿ-ಉಪ ನರ್ಸಿಂಗ್ ಅಧೀಕ್ಷಕರು ಮತ್ತು ಲಿಡ್ವಿನ್ ಡಿಸೋಜಾ-ಮ್ಯಾನೇಜರ್ ರಿಲೇಶನ್ಸ್,  ಇತರ ವೈದ್ಯರು, ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ತ್ರೀರೋಗತಜ್ಞರಾದ ಡಾ. ಮಂಜುನಾಥ್ ಕಾಮತ್ ಅವರು ಮಹಿಳಾ ಆರೋಗ್ಯ ಕುರಿತು ಮಾಹಿತಿ ನೀಡಿದರು. ವೆಲ್ ವಿಮೆನ್ ಕಾರ್ಯಕ್ರಮದಲ್ಲಿ  ಕ್ಲಿನಿಕಲ್ ಅಸೆಸ್ಮೆಂಟ್, ಜೀವನ ಶೈಲಿಯ ಬದಲಾವಣೆಗಳ ಕುರಿತು ಸಮಾಲೋಚನೆ, ಫಲಿತಾಂಶ ಆಧಾರಿತ ವಿಧಾನ ಮತ್ತು ಮಹಿಳೆಯರ ಆರೋಗ್ಯವನ್ನು ನಿರ್ವಹಿಸಲು ತರಬೇತಿ ಪಡೆದ ತಜ್ಞರ ತಂಡದೊಂದಿಗೆ ಚರ್ಚಿಸಲಾಯಿತು.

ಗ್ರೇಸಿ ಡಿಸಿಲ್ವಾ ಸ್ವಾಗತಿಸಿದರು.  ರಿಶ್ನಾ ಫೆರಾವೊ ವಂದಿಸಿದರು.  ವಿದ್ಯಾರ್ಥಿನಿ ಸಿಮೋನ ಕಾರ್ಯಕ್ರಮ ನಿರೂಪಿಸಿದರು.

ವೆಲ್ ವಿಮೆನ್ ಪ್ರೋಗ್ರಾಂ ಉದ್ಘಾಟನೆಯ ಸಂದರ್ಭ 'ವೆಲ್ ವಿಮೆನ್'  ಆರೋಗ್ಯ ತಪಾಸಣೆ ಪ್ಯಾಕೇಜ್ ಅನ್ನು ಮಾರ್ಚ್ 8ರಿಂದ 22ರವರೆಗೆ 50% ರಿಯಾಯಿತಿ ದರದಲ್ಲಿ ನೀಡಲಾಗುವುದು. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ ಸಂಪರ್ಕಿಸಿ 0824 6613165 / 2229165 or email: ajhlounge@gmail.com. ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News