ಅಲಿಗಢ್ ಮುಸ್ಲಿಂ ಯುನಿವರ್ಸಿಟಿಯಿಂದ ನಾಪತ್ತೆಯಾದ ವಿದ್ಯಾರ್ಥಿ ಅಶ್ರಫ್ ಅಲಿ: ತನಿಖೆಗೆ ಆಗ್ರಹ

Update: 2021-03-08 13:28 GMT
photo: twitter

ಹೊಸದಿಲ್ಲಿ: ಅಲಿಗಢ್ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಅಶ್ರಫ್ ಅಲಿ ಎಂಬಾತ ನಾಪತ್ತೆಯಾಗಿದ್ದು, 13 ದಿನಗಳು ಕಳೆದರೂ ಯಾವುದೇ ಸುಳಿವು ದೊರಕಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತಾದಂತೆ ಇದೀಗ ಟ್ವಿಟರ್ ನಾದ್ಯಂತ "#ProtectMuslimStudents" ಟ್ರೆಂಡಿಂಗ್‌ ಆಗಿದೆ.

ಫೆ.23ರ ಸಂಜೆಯಿಂದ ವಿದ್ಯಾರ್ಥಿಯು ನಾಪತ್ತೆಯಾಗಿದ್ದು, ಇದುವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ. ನಾವು ವಿದ್ಯಾರ್ಥಿಯ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಪೊಲೀಸ್ ತಂಡವೊಂದು ಆತ ದಿಲ್ಲಿಗೆ ತೆರಳಿರುವ ಶಂಕೆಯಿಂದ ತನಿಖೆ ಆರಂಭಿಸಿದೆ ಎಂದು ಪೊಲೀಸರು ತಿಳಿಸಿದ್ದರು.

"ಈಗಾಗಲೇ ನಜೀಬ್ ಎಲ್ಲಿದ್ದಾನೆಂದು ನಮಗೆ ಯಾರಿಗೂ ತಿಳಿದಿಲ್ಲ. ಸದ್ಯ ಅಶ್ರಫ್ ಅಲಿ ಕೂಡಾ ಕಾಣೆಯಾಗಿದ್ದಾನೆ. ಇದು ಹೀಗೆಯೇ ಮುಂದುವರಿಯುವುದು ಸರಿಯಲ್ಲ. ಸರಕಾರಕ್ಕೆ ಮತ್ತು ಆಡಳಿತ ವರ್ಗಕ್ಕೆ ತಿಳಿಸಬೇಕೆಂದು ನಾವು ಟ್ವಿಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದೇವೆ ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ. "ನಜೀಬ್‌ ಕಾಣೆಯಾಗಿರುವ ಗಾಯವು ಹಸಿಯಾಗಿಯೇ ಇರುವಾಗ ನಮ್ಮ ಇನ್ನೋರ್ವ ಸ್ನೇಹಿತ ನಾಪತ್ತೆಯಾಗಿರುವುದು ಆತಂಕ ಮೂಡಿಸಿದೆ" ಎಂದು ಇನ್ನೋರ್ವ ವ್ಯಕ್ತಿ ಟ್ವೀಟ್‌ ಮಾಡಿದ್ದಾರೆ. ಸದ್ಯ #ProtectMuslimStudents ಭಾರತದಲ್ಲಿ ಟ್ರೆಂಡಿಂಗ್‌ ನಲ್ಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News