ತಮಿಳುನಾಡಿನಲ್ಲಿ ಎಎಂಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡ ಉವೈಸಿಯ ಎಐಎಂಐಎಂ ಪಕ್ಷ

Update: 2021-03-08 14:41 GMT

ಚೆನ್ನೈ: ಬಿಹಾರದ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಬಳಿಕ ಇದೀಗ ಅಸದುದ್ದೀನ್ ಉವೈಸಿ ನಾಯಕತ್ವದ ಎಐಎಂಐಎಂ ಪಕ್ಷವು ತಮಿಳುನಾಡಿನ ಚುನಾವಣೆಯಲ್ಲಿ ಸ್ಫರ್ಧಿಸಲಿದೆ ಎಂದು ತಿಳಿದು ಬಂದಿದೆ. ಟಿಟಿವಿ ದಿನಕರನ್‌ ರ ಅಮ್ಮ ಮಕ್ಕಳ್‌ ಮುನ್ನೇಟ್ರ ಕಝಗಮ್‌ (ಎಎಂಎಂಕೆ) ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೊತೆಯಾಗಿ ಸೆಣಸಾಡಲಿದೆ ಎನ್ನಲಾಗಿದೆ.

ನವೆಂಬರ್‌ ನಲ್ಲಿ ಬಿಹಾರದಲ್ಲಿ ನಡೆದಿದ್ದ ಚುನಾವಣೆಯ ಸಂದರ್ಭ ಒಟ್ಟು 14 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎಐಎಂಐಎಂ ಪಕ್ಷವು 5 ಸೀಟುಗಳನ್ನು ಗೆದ್ದಿತ್ತು. ಆದರೆ ಇದರಿಂದಾಗಿ ಹಲವು ಕಡೆಗಳಲ್ಲಿ ಬಿಜೆಪಿಗೆ ಲಾಭವಾಗಿದೆ ಎಂದು ಆರೋಪಗಳು ಕೇಳಿ ಬಂದಿತ್ತು. ʼಬಿಜೆಪಿಯ ಬಿ ತಂಡʼ ಹಾಗೂ ʼಮತ ವಿಭಜಕʼ ಎಂದೂ ದೂರಲಾಗಿತ್ತು.

ಏಪ್ರಿಲ್ 6 ರಂದು ನಡೆಯಲಿರುವ ಚುನಾವಣೆಯಲ್ಲಿ ಎಎಂಎಂಕೆ ಜೊತೆಗಿನ ಮೈತ್ರಿಯ ಪಾಲಿನ ಭಾಗವಾಗಿ, ಎಐಎಂಐಎಂ ತಮಿಳುನಾಡಿನ 234 ಸ್ಥಾನಗಳಲ್ಲಿ ಮೂರು ಸ್ಥಾನಗಳಾದ ವಾನಿಯಂಬಾಡಿ, ಕೃಷ್ಣಗಿರಿ ಮತ್ತು ಶಂಕರಪುರಂಗಳಲ್ಲಿ ಸ್ಪರ್ಧಿಸಲಿದೆ ಎಂದು ತಿಳಿದು ಬಂದಿದೆ

2016 ರಲ್ಲಿ, ಎಐಎಂಐಎಂ ತನ್ನ ರಾಜ್ಯ ಘಟಕದ ಮುಖ್ಯಸ್ಥ ವಕೀಲ್ ಅಹ್ಮದ್ ಅವರನ್ನು ವಾನಿಯಂಬಾಡಿಯಿಂದ ಕಣಕ್ಕಿಳಿಸಿತ್ತು ಮತ್ತು ಸುಮಾರು 10,000 ರಷ್ಟು ಮತಗಳೊಂದಿಗೆ ಆರು ಶೇಕಡಾ ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News