ಉಡುಪಿ ​ಜಿಲ್ಲೆಯ ಕೋಡಿ ಗ್ರಾಪಂಗೆ ಮಾ.29ಕ್ಕೆ ಚುನಾವಣೆ

Update: 2021-03-08 16:06 GMT

ಉಡುಪಿ, ಮಾ.8: ಜನರು ಮತದಾನ ಬಹಿಷ್ಕರಿಸಿ ನಾಮಪತ್ರವನ್ನೇ ಸಲ್ಲಿಸದ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಗ್ರಾಪಂಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯ ವೇಳೆ ಮತದಾನ ನಡೆಯದ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಪಂಗೆ ಇದೇ ಮಾ.29ರಂದು ಚುನಾವಣೆ ನಿಗದಿಯಾಗಿದೆ.

ಕೋಡಿ ಗ್ರಾಪಂನ 12 ಸ್ಥಾನಗಳೊಂದಿಗೆ, ಕುಂದಾಪುರ ತಾಲೂಕಿನ ಕುಂಭಾಶಿ ಗ್ರಾಪಂನಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಇದೇ ದಿನದಂದು ಮತದಾನ ನಡೆಯಲಿದೆ.

ರಾಜ್ಯ ಚುನಾವಣಾ ಆಯೋಗವು 2021ರ ಮೇ ತಿಂಗಳಲ್ಲಿ ಅವಧಿ ಮುಕ್ತಾಯಗೊಳ್ಳುವ ಗ್ರಾಪಂಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಗ್ರಾಪಂ ಸ್ಥಾನಗಳಿಗೆ ಉಪಚುನಾವಣೆಯನ್ನು ಇಂದು ಘೋಷಿಸಿದೆ.
ಇದರಂತೆ ಗ್ರಾಪಂ ಚುನಾವಣೆಗೆ ಮಾ.15ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸಲಿದ್ದು, ಮಾ.19 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಮಾ.20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮಾ.22 ನಾಮಪತ್ರ ಹಿಂದೆಗೆತಕ್ಕೆ ಕೊನೆಯ ದಿನವಾಗಿದೆ.

ಅಗತ್ಯವಿದ್ದರೆ ಮಾ.29ರಂದು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಅವಶ್ಯವಿದ್ದರೆ ಮಾ.30ರಂದು ಮರುಮತದಾನ ನಡೆಯಲಿದೆ. 31ರಂದು ತಾಲೂಕು ಕೇಂದ್ರಗಳಲ್ಲಿ ಮತಗಳ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ದಕ್ಷಿಣ ಕನ್ನಡ 3 ಸ್ಥಾನಗಳಿಗೆ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ, ಬಂಟ್ವಾಳ ತಾಲೂಕಿನ ಮಾಣಿಲ ಮತ್ತು ಪುದು ಗ್ರಾಪಂಗಳ ತಲಾ ಒಂದು ಸ್ಥಾನಗಳಿಗೆ ಮಾ.29ರಂದು ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News