ಬ್ಯಾಂಕ್, ವಿಮಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಮೊಂಬತ್ತಿ ಬೆಳಕಿನಲ್ಲಿ ಪ್ರತಿಭಟನೆ

Update: 2021-03-08 16:24 GMT

ಉಡುಪಿ, ಮಾ.8: ಎಲ್‌ಐಸಿ ಶೇರು ವಿಕ್ರಯ, ರಾಷ್ಟ್ರೀಕೃತ ಬ್ಯಾಂಕು ಮತ್ತು ರಾಷ್ಟ್ರೀಕೃತ ಸಾಮಾನ್ಯ ವಿಮಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಉಡುಪಿ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಇಂದು ಸಂಜೆ ಮೊಂಬತ್ತಿ ಬೆಳಕಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಉಡುಪಿಯ ಅಜ್ಜರಕಾಡಿನಲ್ಲಿರುವ ಎಲ್‌ಐಸಿ ಉಡುಪಿ ವಿಭಾಗ ಕಚೇರಿ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದ ಸಿಐಟಿಯು ಮುಖಂಡ ವಿಶ್ವನಾಥ ರೈ ಮಾತನಾಡಿ, ಈ ಹಿಂದೆ ದೇಶದ ಅಭಿವೃದ್ಧಿ, ಕೃಷಿ, ಮೂಲಭೂತ ಸೌಕರ್ಯ, ಆರೋಗ್ಯ ಕ್ಷೇತ್ರಗಳಿಗೆ ಹಣಕಾಸು ಒದಗಿಸುತ್ತಿದ್ದ ಬ್ಯಾಂಕ್, ವಿಮಾ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಇಂದಿನ ಆಳುವ ವರ್ಗ ಮತ ಹಾಕಿರುವ ದೇಶದ ಜನತೆಯ ನಿರೀಕ್ಷೆಯನ್ನು ಹುಸಿಗೊಳಿ ಸುತ್ತಿದೆ ಎಂದು ದೂರಿದರು.

ಸಭೆಯನ್ನುದ್ದೇಶಿಸಿ ಎಐಐಬಿಇಎಯ ರಾಜ್ಯ ಸಮಿತಿ ಸದಸ್ಯ ಕೆನರಾ ಬ್ಯಾಂಕಿನ ರಮೇಶ್ ಕೆ., ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, ಬಿಇಎಫ್‌ಐಯ ರವೀಂದ್ರ, ವಿಮಾ ನೌಕರರ ಸಂಘ ಉಡುಪಿ ವಿಭಾಗದ ಪ್ರಧಾನ ಕಾರ್ಯ ದರ್ಶಿ ಪ್ರಭಾಕರ ಬಿ.ಕುಂದರ್, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸಂಾಲಕ ಕೆ.ಶಂಕರ್ ಮಾತನಾಡಿದರು.

ಪ್ರತಿಭಟನೆಯಲ್ಲಿ ವಿಮಾ ನೌಕರರ ಸಂಘ ಉಡುಪಿ ವಿಭಾಗದ ಅಧ್ಯಕ್ಷ ಕೆ.ವಿಶ್ವನಾಥ್, ವಿವಿಧ ಸಂಘಟನೆಗಳ ಮುಖಂಡರಾದ ರಮೇಶ್ ಆಚಾರ್ಯ, ಸಂತೋಷ್ ಶೆಟ್ಟಿ, ನಾಗೇಶ್ ನಾಯಕ್, ಪ್ರೇಮನಾಥ ಪೂಜಾರಿ ಮೊದಲಾದ ವರು ಉಪಸ್ಥಿತರಿದ್ದರು. ಬಳಿಕ ಪ್ರತಿಭಟನಾ ಮೆರವಣಿಗೆಯು ಹುತಾತ್ಮರ ಚೌಕದವರೆಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News