​ಮೀನುಗಾರ ಸಮುದ್ರಪಾಲು

Update: 2021-03-08 16:27 GMT

ಗಂಗೊಳ್ಳಿ, ಮಾ.8: ಗಂಗೊಳ್ಳಿ ಬಂದರಿನಿಂದ 5 ಕಿ.ಮೀ ದೂರದ ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರೊಬ್ಬರು ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ವರದಿ ಯಾಗಿದೆ.

ಮೃತರನ್ನು ಪಾಂಡು(47) ಎಂದು ಗುರುತಿಸಲಾಗಿದೆ. ಇವರು ಸಾಗರದೀಪ ಎಂಬ ಪರ್ಶಿಯನ್ ಬೋಟ್ನಲ್ಲಿ ಇತರ ಮೀನುಗಾರ ರೊಂದಿಗೆ ಮಾ.6 ರಂದು ಸಂಜೆ ಮೀನುಗಾರಿಕೆಗೆ ತೆರಳಿದ್ದು, ಮಾ.7ರಂದು ಬೆಳಗಿನ ಜಾವ ಮೀನುಗಾರಿಕೆ ನಡೆಸುತ್ತಿದ್ದಾಗ ಅಬ್ಬರದ ಅಲೆಗೆ ಬೋಟು ತೇಲಿತ್ತೆನ್ನಲಾಗಿದೆ. ಇದರಿಂದ ಬೋಟಿನಲ್ಲಿದ್ದ ಪಾಂಡು ಆಯತಪ್ಪಿಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿ ದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News