ಸ್ಕೇಟಿಂಗ್ : ಮುಹಮ್ಮದ್ ಶಾಮಿಲ್ ಅರ್ಷದ್ ರಾಷ್ಟ್ರಮಟ್ಟಕ್ಕೆ ಆಯ್ಕೆ

Update: 2021-03-08 16:34 GMT

ಮಂಗಳೂರು, ಮಾ.8: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಮಾ.4ರಿಂದ 7ರವರೆಗೆ ಮೈಸೂರಿನಲ್ಲಿ ಆಯೋಜಿಸಿದ್ದ 36ನೇ ರಾಜ್ಯ ಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 11ರಿಂದ 14 ವರ್ಷದ ಬಾಲಕರ ಇನ್‌ಲೈನ್ ವಿಭಾಗದಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಶಾಮಿಲ್ ಅರ್ಷದ್ 500+ಡಿ ರಿಂಕ್ ರೇಸ್‌ನಲ್ಲಿ ಚಿನ್ನದ ಪದಕ, 1 ಲ್ಯಾಪ್ ರೋಡ್ ರೇಸ್‌ನಲ್ಲಿ ಚಿನ್ನದ ಪದಕ, 3,000 ಮೀ. ರೋಡ್ ರೇಸ್‌ನಲ್ಲಿ ಚಿನ್ನದ ಪದಕ ಹಾಗೂ ವೈಯಕ್ತಿಕ ಚಾಂಪಿಯನ್ ಶಿಪ್ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಾ. 31ರಿಂದ ಎ.11ರವರೆಗೆ ಪಂಜಾಬ್‌ನ ಮೋಹಲಿಯಲ್ಲಿ ರಾಷ್ಟ್ರ ಮಟ್ಟದ ಈ ಸ್ಕೇಟಿಂಗ್ ಸ್ಪರ್ಧೆ ನಡೆಯಲಿದೆ. ಈಗಾಗಲೇ ರಾಷ್ಟ್ರ, ರಾಜ್ಯ, ಜಿಲ್ಲಾ ಹಾಗೂ ಅಂತರ್ ಶಾಲಾ ಮಟ್ಟದಲ್ಲಿ ಅನೇಕ ಪದಕಗಳನ್ನು ಗಳಿಸಿರುವ ಇವರು ಯೆನೆಪೊಯ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ. ಹೈಫೈಯಸ್ರ್ ಸ್ಕೇಟಿಂಗ್ ಕ್ಲಬ್ನಲ್ಲಿ ಮೋಹನ್‌ದಾಸ್ ಕೆ. ಹಾಗೂ ಜಯರಾಜ್ ಅವರಿಂದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಅರ್ಷದ್ ಹುಸೈನ್ ಹಾಗೂ ರಮ್ಲತ್ ಅರ್ಷದ್ ದಂಪತಿಯ ಪುತ್ರ ಶಾಮಿಲ್ 2018-19 ನೇ ಸಾಲಿನ ದ.ಕ.ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಪುರಸ್ಕಾರ ಪ್ರಶಸ್ತಿಕ್ಕೂ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News