ಡೈಮಂಡ್ ಇಂಟರ್ ನ್ಯಾಶನಲ್ ಸ್ಕೂಲ್ ವತಿಯಿಂದ ಬಂಟ್ವಾಳ ತಹಶೀಲ್ದಾರ್ ರಶ್ಮಿಯೊಂದಿಗೆ ಮಹಿಳಾ ದಿನಾಚರಣೆ

Update: 2021-03-08 17:02 GMT

ಬಂಟ್ವಾಳ : ಡೈಮಂಡ್ ಇಂಟರ್ ನ್ಯಾಶನಲ್ ಸ್ಕೂಲ್ ಆಡಳಿತ ಮತ್ತು ವಿದ್ಯಾರ್ಥಿಗಳು ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ ಅವರೊಂದಿಗೆ ಮಹಿಳಾ ದಿನಾಚರಣೆಯನ್ನು ಆಚರಿಸಿದರು.

ಬಿ.ಸಿ.ರೋಡ್ ನಲ್ಲಿರುವ ಮಿನಿ ವಿಧಾನ ಸೌದಕ್ಕೆ ಬಲೂನ್, ಕೇಕ್ಸ್, ಚಾಕಲೇಟ್ಸ್, ಕಾರ್ಡ್ ನೊಂದಿಗೆ ಆಗಮಿಸಿದ ವಿದ್ಯಾರ್ಥಿಗಳು ತಹಶೀಲ್ದಾರ್ ಅವರೊಂದಿಗೆ ಮಹಿಳಾ ದಿನ ಆಚರಿಸಿದರು.

ಬಿ.ಸಿ.ರೋಡ್ ಕೈಕಂಬದಲ್ಲಿರುವ ಡೈಮಂಡ್ ಇಂಟರ್ ನ್ಯಾಶನಲ್ ಸ್ಕೂಲ್ ವಿಶಿಷ್ಠ ಕಾರ್ಯಕ್ರಮಗಳೊಂದಿಗೆ ಹಬ್ಬಗಳನ್ನು- ವಿಶೇಷ ದಿನಗಳನ್ನು ಆಚರಿಸಿ, ವಿದ್ಯಾರ್ಥಿಗಳಿಗೆ ಸಾಮಾಜಿಕ ವಿಷಯಗಳ ಶಿಕ್ಷಣ ನೀಡುತ್ತದೆ. ಪ್ರತೀ ಹಬ್ಬ ಮತ್ತು ವಿಶೇಷ ದಿನಾಚರಣೆಯ ಹಿಂದಿರುವ ಮಹತ್ವವನ್ನು ಪ್ರಾಯೋಗಿಕವಾಗಿ ವಿವರಿಸುತ್ತದೆ.  ಮಹಿಳಾ ದಿನಾಚರಣೆಯಂದು ಮಹಿಳಾ ತಹಶೀಲ್ದಾರ್ ರನ್ನು ಭೇಟಿ ಮಾಡಿಸಿ, ಅವರ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಪ್ರೇರಣೆ ಒದಗಿಸಿದೆ. ತಹಶೀಲ್ದಾರ್ ಅವರ ಕರ್ತವ್ಯ ಮತ್ತು ಜವಾಬ್ದಾರಿ, ಮಹಿಳೆಯ ಸಾಧನೆ ಮತ್ತು ಅವಕಾಶಗಳನ್ನು ಸೂಚಿಸುವ ಸುಂದರ ಕಾರ್ಯಕ್ರಮ ಇದಾಗಿತ್ತು.

ಕಾರ್ಯಕ್ರಮದಲ್ಲಿ ಡೈಮಂಡ್ ಸ್ಕೂಲ್ ನ ಆಡಳಿತ ಮುಖ್ಯಸ್ಥೆ ಸನಾ ಅಲ್ತಾಫ್ ಕಾರ್ಯಕ್ರಮದ ಉದ್ದೇಶ ವಿವರಿಸಿದರು.  ಹಫೀಝಾ ಮತ್ತು ವಿನಯ್ ಅವರು ಮಹಿಳಾ ದಿನಾಚರಣೆಯ ವಿಶೇಷತೆ ಕುರಿತು ಮಾತನಾಡಿದರು.

ತಹಶೀಲ್ದಾರ್ ರಶ್ಮಿ ಅವರು ಕೇಕ್ ಕತ್ತರಿಸಿ, ವಿಭಿನ್ನವಾಗಿ ಈ ದಿನವನ್ನು ಆಚರಿಸಲು ಅವಕಾಶ ಕೊಟ್ಟ ಡೈಮಂಡ್ ಸ್ಕೂಲ್ ನ ಶಿಕ್ಷಕ ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಮಹಿಳೆಯ ಅವಕಾಶ ಮತ್ತು ಸಾಧನೆಗಳನ್ನು ಪರಿಚಯಿಸುವ ಇಂತಹ ಸಂದೇಶ ಬಹಳ ಇಷ್ಟವಾಯಿತು ಎಂದು ಹೇಳಿದರು.

ನಿಶಾ ಕಾರ್ಯಕ್ರಮ ನಿರೂಪಿಸಿದರು, ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಗಿರೀಶ್ ಕಾಮತ್ , ತಂನ್ಸೀರಾ, ಜಿನ್ನಾ, ಸಂಧ್ಯಾ, ರೇವತಿ, ಜಯಲಕ್ಷ್ಮೀ, ವಿನಯಾ, ಪ್ರೀತಿ, ರಂಝೀಯಾ, ರುಕ್ಸಾನ, ಸನೀನಾ, ಹಫೀಝಾ ಹಾಗು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News