ಉಡುಪಿ: ಮನೆಯ ಮೇಲೆ ದಾಳಿ ನಡೆಸಿದ ಎಸಿಬಿ
Update: 2021-03-09 11:30 IST
ಉಡುಪಿ, ಮಾ.9: ರಾಜ್ಯಾದ್ಯಂತ ಇಂದು 28 ಕಡೆಗಳಲ್ಲಿ 9 ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆದಿದ್ದು, ಅದರಂತೆ ಉಡುಪಿ ಜಿಲ್ಲೆಯಲ್ಲಿ ಅಧಿಕಾರಿಯೊಬ್ಬರ ನಿವಾಸದ ಮೇಲೆ ದಾಳಿ ನಡೆದಿದೆ.
ಉಡುಪಿಯ ಹೊರವಲಯದ ಪುತ್ತೂರು ಎಂಬಲ್ಲಿರುವ ಮೈಸೂರು ಟೌನ್ ಆ್ಯಂಡ್ ಕಂಟ್ರಿ ಪ್ಲ್ಯಾನಿಂಗ್ ಇದರ ಜಂಟಿ ನಿರ್ದೇಶಕ ಸುಬ್ರಹ್ಮಣ್ಯ ಕೆ. ವಡ್ಡರ್ ಎಂಬವರ ಮನೆಯ ಮೇಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಎಸಿಬಿ ಮಂಗಳೂರು ವಿಭಾಗದ ಎಸ್ಪಿ ಬೋಪಯ್ಯ, ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ಬೆಳ್ಳಬೆಳಗ್ಗೆ ದಾಳಿ ನಡೆಸಿರುವ ಅಧಿಕಾರಿಗಳು ನಗ, ನಗದಿಗೆ ಸಂಬಂಧಿಸಿ ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.
ಇನ್ ಸ್ಪೆಕ್ಟರ್ ಸತೀಶ್, ಚಂದ್ರಕಲಾ, ಯತೀಶ್, ಪ್ರಸನ್ನ ರವೀಂದ್ರ ಗಾಣಿಗ, ಅಬ್ದುಲ್ ಜಲೀಲ್, ಎಫ್ ಡಿಎ ರಮೇಶ್ ಭಂಡಾರಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.