×
Ad

11 ವರ್ಷದ ಬಾಲಕಿಯ ಅತ್ಯಾಚಾರ: ಅಪರಾಧಿಗೆ ಮರಣದಂಡನೆ

Update: 2021-03-09 18:36 IST

ಲಕ್ನೊ: ಕಳೆದ ವರ್ಷ ಆಗಸ್ಟ್ ನಲ್ಲಿ ಉತ್ತರಪ್ರದೇಶದ ಜೌನ್ ಪುರ ಜಿಲ್ಲೆಯಲ್ಲಿ 11ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪದ ಮೇಲೆ ಜೌನ್ ಪುರದ ವಿಶೇಷ ಫೋಕ್ಸೊ ನ್ಯಾಯಾಲಯವು ಅಪರಾಧಿ ಬಾಲ್ ಗೋವಿಂದ್ ಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಜೌನ್ ಪುರದ ಪೋಸ್ಕೊ  ನ್ಯಾಯಾಲಯವು 2020ರ ಆಗಸ್ಟ್ ನಲ್ಲಿ 11ರ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ ಬಾಲ್ ಗೋವಿಂದ್ ಗೆ ಸೋಮವಾರ ಮರಣದಂಡನೆ ಶಿಕ್ಷೆ ವಿಧಿಸಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ)ಅವನೀಶ್ ಕುಮಾರ್ ಅವಸ್ಥಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ನ್ಯಾಯಾಲಯವು ಅಪರಾಧಿಗೆ ಮರಣದಂಡನೆಯಲ್ಲದೆ 10,000 ರೂ. ದಂಡವನ್ನು ವಿಧಿಸಿದೆ.

ಮಡಿಯಾಹು ಪ್ರದೇಶದಲ್ಲಿರುವ ಹಳ್ಳಿಯಲ್ಲಿ ಬಾಲಕಿಯನ್ನು ಅಪಹರಿಸಿದ್ದ ಗೋವಿಂದ್ ಬಳಿಕ ಅತ್ಯಾಚಾರ ಎಸಗಿದ್ದ. ಈ ಕುರಿತಂತೆ ಬಾಲಕಿಯ ತಂದೆ ಎಫ್ ಐಆರ್ ದಾಖಲಿಸಿದ್ದರು.

ಪೊಲೀಸರು ಈ ಪ್ರಕರಣವನ್ನು ಪರಿಣಾಮಕಾರಿಯಾಗಿ ತನಿಖೆ ನಡೆಸಿದ ಕಾರಣ ಕೇವಲ ಏಳು ತಿಂಗಳಲ್ಲಿ ಅಪರಾಧಿಗೆ  ಶಿಕ್ಷೆಯಾಗಿದೆ. ನ್ಯಾಯಾಲಯದಲ್ಲಿ ಪೊಲೀಸರು ಅಚ್ಚುಕಟ್ಟಾಗಿ ಪ್ರಕರಣವನ್ನು ಮುನ್ನಡೆಸಿದರು ಎಂದು ಅವಸ್ಥಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News