×
Ad

ಮುಸ್ಲಿಮರಿಗೆ ಶೇ.10 ಮೀಸಲಾತಿ ಕಲ್ಪಿಸಲು ಮುಸ್ಲಿಂ ಲೀಗ್ ಮನವಿ

Update: 2021-03-09 18:56 IST

ಮಂಗಳೂರು, ಮಾ.9: ರಾಜ್ಯದಲ್ಲಿ ಮುಸಲ್ಮಾನರನ್ನು ಪ್ರವರ್ಗ 2ಬಿಯಲ್ಲಿ ಸೇರಿಸಿ ಶೇ.4 ಮೀಸಲಾತಿ ಕಲ್ಪಿಸಿ ಅನ್ಯಾಯ ಮಾಡಲಾಗಿದೆ. ಈ ಮೀಸಲಾತಿ ತುಂಬಾ ಕಡಿಮೆಯಾಗಿದ್ದು ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ಶೇ.10 ಮೀಸಲಾತಿ ಹೆಚ್ಚಿಸಬೇಕು ಎಂದು ರಾಜ್ಯ ಸರಕಾರಕ್ಕೆ ದ.ಕ.ಜಿಲ್ಲಾಧಿಕಾರಿಗಳ ಮೂಲಕ ದ.ಕ.ಜಿಲ್ಲಾ ಮುಸ್ಲಿಂ ಲೀಗ್ ಮನವಿ ಸಲ್ಲಿಸಿದೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಕಲ್ಪಿಸಲಾಗಿದೆ. ಈ ಮೀಸಲಾತಿಯನ್ನು ಹಿಂಬಾಗಿಲಿನ ಮೂಲಕ ಕಬಳಿಸಲು ರಾಜಿಕೀಯ ಬೆಂಬಲದೊಂದಿಗೆ ನಡೆಯುತ್ತಿರುವ ಹುನ್ನಾರವನ್ನು ಮುಸ್ಲಿಂ ಲೀಗ್ ಖಂಡಿಸಿದೆ.

ನ್ಯಾಯವಾದಿ ಹಾಗೂ ಲೀಗ್‌ನ ಜಿಲ್ಲಾಧ್ಯಕ್ಷ ಸುಲೈಮಾನ್ ಎಸ್. ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ನಿಯೋಗದಲ್ಲಿ ಕರೀಮ್ ಕಡಬ, ಕತರ್ ಇಬ್ರಾಹಿಂ ಹಾಜಿ ಸುಳ್ಯ, ರಿಯಾಝ್ ಹರೇಕಳ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News