ಕೋಡಿ ಬ್ಯಾರೀಸ್ ಕಾಲೇಜು ಕ್ರಿಕೆಟ್ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ
Update: 2021-03-09 19:55 IST
ಕುಂದಾಪುರ, ಮಾ.9: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕುಂದಾಪುರ ಭಂಡಾರ್‌ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ಜಂಟಿ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ ಕ್ರಿಕೆಟ್(ಲೆದರ್ ಬಾಲ್) ಪಂದ್ಯಾಟದಲ್ಲಿ ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.
ಸೆಮಿಫೈನಲ್‌ನಲ್ಲಿ ಡಾ.ಬಿ.ಬಿ.ಹೆಗ್ಡೆ ಕಾಲೇಜನ್ನು ಸೋಲಿಸಿ ಫೈನಲ್ ಪ್ರವೇಶಿ ಸಿದ ತಂಡ, ಫೈನಲ್‌ನಲ್ಲಿ ಭಂಡಾರ್‌ಕಾರ್ಸ್ ಕಾಲೇಜಿನ ವಿರುದ್ದ ಜಯ ಸಾಧಿಸಿತು. ತೃತೀಯ ಬಿಕಾಂನ ಮಹಮ್ಮದ್ ಹಯಾಝ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಸ್ಥೆಯ ಅಧ್ಯಕ್ಷ ಕೆ.ಎಂ.ಅಬ್ದುಲ್ ರೆಹಮಾನ್, ನಿರ್ದೇಶಕ ದೋಮ ಚಂದ್ರಶೇಖರ್ ಹಾಗೂ ಪ್ರಾಂಶುಪಾಲ ಡಾ.ಶಮೀರ್ ಉಪಸ್ಥಿತರಿದ್ದರು. ಮಹಮ್ಮದ್ ಇಲಿಯಾಸ್ ಹಾಗೂ ವೀಣಾ ಅಗೇರ್ ತಂಡವನ್ನು ತರಬೇತು ಗೊಳಿಸಿದ್ದರು.