ತಮಿಳುನಾಡು ವಿಧಾನಸಭಾ ಚುನಾವಣೆ: ಕಮಲ್ ಹಾಸನ್ ಪಕ್ಷದಿಂದ 154 ಸ್ಥಾನಗಳಿಗೆ ಸ್ಪರ್ಧೆ
Update: 2021-03-09 21:09 IST
ಚೆನ್ನೈ,ಮಾ.9: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 154 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ನಟ-ರಾಜಕಾರಣಿ ಕಮಲ ಹಾಸನ್ ಅವರ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಪಕ್ಷವು ಪ್ರಕಟಿಸಿದೆ.
234 ಸದಸ್ಯ ಬಲದ ವಿಧಾನಸಭೆಯಲ್ಲಿ ಉಳಿದ 80 ಸ್ಥಾನಗಳನ್ನು ಎಂಎನ್‌ಎಂ ತನ್ನ ಮಿತ್ರಪಕ್ಷಗಳಾದ ಆಲ್ ಇಂಡಿಯಾ ಸಮತುವಾ ಮಕ್ಕಳ್ ಕಚ್ಚಿ ಮತ್ತು ಇಂಡಿಯಾ ಜನನಾಯಕ ಕಚ್ಚಿಗೆ ಸಮಾನವಾಗಿ ಹಂಚಿಕೆ ಮಾಡಿದೆ.
ಮೂರು ಪಕ್ಷಗಳು ಸ್ಥಾನ ಹಂಚಿಕೆ ಒಪ್ಪಂದವನ್ನು ಮಾಡಿಕೊಂಡಿವೆಯಾದರೂ,ಅವುಗಳಿಗೆ ಹಂಚಿಕೆಯಾಗುವ ಕೇತ್ರಗಳ ಬಗ್ಗೆ ಇನ್ನಷ್ಟೇ ನಿರ್ಣಯ ಕೈಗೊಳ್ಳಬೇಕಿದೆ.