×
Ad

ಕುಂದಾಪುರ: ಮಾ.14ಕ್ಕೆ ಕನ್ನಡ ಮೀಡಿಯಾ ಡಾಟ್‌ಕಾಮ್ಗೆ ಚಾಲನೆ

Update: 2021-03-09 21:24 IST

 ಕುಂದಾಪುರ, ಮಾ.9: ಕೊರೋನ ಲಾಕ್‌ಡೌನ್ ವೇಳೆಗೆ ಆರಂಭಗೊಂಡು ಈ ತನಕ ಪ್ರಾಯೋಗಿಕವಾಗಿ ಪ್ರಕಟಗೊಳ್ಳುತ್ತಿದ್ದ ‘ಕನ್ನಡ ಮೀಡಿಯಾ ಡಾಟ್‌ಕಾಮ್’ ಅಂತರ್ಜಾಲ ಸುದ್ದಿ ತಾಣದ ಉದ್ಘಾಟನಾ ಕಾರ್ಯಕ್ರಮ ಮಾ.14ರ ರವಿವಾರ ಸಂಜೆ 4:00ಕ್ಕೆ ಕುಂದಾಪುರದ ಕಲಾಮಂದಿರದಲ್ಲಿ ನಡೆಯಲಿದೆ.

ಹಿರಿಯ ಪತ್ರಕರ್ತ ಹಾಗೂ ಸಮಾಜಮುಖಿ ಚಿಂತಕ ದಿನೇಶ್ ಅಮಿನ್ ಮಟ್ಟು ಈ ಅಂತರ್ಜಾಲ ಸುದ್ದಿತಾಣವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಖ್ಯಾತ ನ್ಯಾಯವಾದಿ, ಜನಪರ ಹೋರಾಟಗಾರ ಸುಧೀರ್ ‌ಕುಮಾರ್ ಮುರೋಳಿ ಹಾಗೂ ಜನಪರ ಚಿಂತಕ ಹಾಗೂ ವಾಗ್ಮಿ ನಿಕೇತ್‌ ರಾಜ್ ಮೌರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸುದ್ದಿ ಜಾಲತಾಣದ ಪ್ರಧಾನ ಸಂಪಾದಕ ಮತ್ತು ವ್ಯಂಗ್ಯ ಚಿತ್ರಕಾರರಾದ ಚಂದ್ರಶೇಖರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News