×
Ad

ಮಾರ್ಚ್ 12 ರಿಂದ ಪೊಯ್ಯತ್ತಬೈಲ್ ಉರೂಸ್

Update: 2021-03-10 23:24 IST

ಮಂಜೇಶ್ವರ :  ವರ್ಕಾಡಿ ಸಮೀಪದ ಪೊಯ್ಯತ್ತಬೈಲ್ ಜುಮಾ ಮಸೀದಿ ಹಾಗೂ ಮಣವಾಟಿ ಬೀವಿ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮವು  ಮಾ. 12 ರಿಂದ ಮಾರ್ಚ್ 14 ರ ತನಕ ನಡೆಯಲಿರುವುದಾಗಿ ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮಾರ್ಚ್ 12 ರಂದು ಜುಮಾ ನಮಾಝ್ ಬಳಿಕ ಖಾಝಿ ತಾಜುಶ್ಶರೀಅ ಶೈಖುನಾ ಎಂ. ಅಲಿ ಕುಂಞಿ ಉಸ್ತಾದ್ ಮಖಾಂ ಝಿಯಾರತಿನ ಬಳಿಕ  ಪೊಯ್ಯತ್ತಬೈಲ್ ಜಮಾಅತ್ ಕಮಿಟಿ ಅಧ್ಯಕ್ಷ  ಡಿಎಂಕೆ ಮೊಹಮ್ಮದ್ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಸಂಯುಕ್ತ ಜಮಾಅತ್ ಅಧ್ಯಕ್ಷ ಅಲ್ ಹಾಜ್ ಅಸ್ಸಯ್ಯದ್ ಅತಾವಲ್ಲಾ ತಂಙಳ್ ಎಂ. ಎ. ಉದ್ಯಾವರ ಧ್ವಜಾರೋಹಣ ಗೈಯಲಿದ್ದಾರೆ. ಈ ಸಂದರ್ಭ ಪೊಯ್ಯತ್ತಬೈಲ್ ಮಾಜಿ ಅಧ್ಯಕ್ಷರುಗಳಾದ ನಡಿಬೈಲ್ ಅಹ್ಮದ್ ಕುಂಞಿ ಹಾಜಿ, ಹಾಜಿ ಟಿ ಆಹ್ಮದ್ ಕುಂಞಿ ಹಾಜಿ, ವಿ ಆಹ್ಮದ್ ಕುಂಞಿ ಓಡಂಗಲ, ಟಿ ಇಸ್ಮಾಯಿಲ್  ಉಪಸ್ಥಿರಿರುವರು.

ಮಾ. 13 ರಂದು ವಿದ್ಯಾರ್ಥಿ ಮತ್ತು ಉಲಮಾ ಸಂಗಮ, ಖತಮುಲ್ ಖುರ್ ಅನ್ ಪಾರಾಯಣ ಹಾಗೂ ಪ್ರಾರ್ಥಣಾ ಮಜ್ಲಿಸ್ ನಡೆಯಲಿದೆ. 14 ರಂದು ಹಗಲು ಉರೂಸ್ ಹಾಗೂ ಅನ್ನದಾನ ನಡೆಯಲಿದೆ.  ಮೌಲಿದ್ ಪಾರಾಯಣಕ್ಕೆ  ಅಸ್ಸಯ್ಯದ್ ಆಹಮ್ಮದ್ ಶಿಹಾಬುದ್ದೀನ್ ಅಲ್ ಮಶ್ ಹೂರ್ ತಂಙಳ್ ತಲೆಕ್ಕಿ ನೇತೃತ್ವ ನೀಡಲಿದ್ದು, ಮುಖ್ಯ ಅತಿಥಿಯಾಗಿ ಸುಲ್ತಾನುಲ್ ಉಲಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಬಾಗವಹಿಸಲಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News