ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾಗಿ ಹುಸೈನ್ ಕಾಟಿಪಳ್ಳ ಆಯ್ಕೆ
ಮಂಗಳೂರು : ಪ್ರೀತಿ ಶಾಂತಿ ಸಾಮರಸ್ಯ ಎಂಬ ಧ್ಯೇಯವಾಕ್ಯದೊಂದಿಗೆ ಕಾಟಿಪಳ್ಳ 2 ನೇ ಬ್ಲಾಕ್ ವ್ಯಾಪ್ತಿಯ ಯುವಕ ಸಂಘಟನೆ ಗಳನ್ನೊಳಗೊಂಡ ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟ ಎಂಬ ಸಂಘಟನೆಯನ್ನು ಇತ್ತೀಚೆಗೆ ಹುಟ್ಟುಹಾಕಲಾಯಿತು. ಇದರ ಸ್ಥಾಪಕ ಅಧ್ಯಕ್ಷರಾಗಿ ಸರ್ವಾನುಮತದಿಂದ ಕವಿ ಹುಸೈನ್ ಕಾಟಿಪಳ್ಳ ಆಯ್ಕೆಯಾದರು.
ಇತರ ಪದಾಧಿಕಾರಿಗಳಾಗಿ ಹಸನ್ ಬಾವಾ (ಗೌರವಾಧ್ಯಕ್ಷರು), ಅಬ್ದುಲ್ ಖಯ್ಯೂಮ್ (ಪ್ರಧಾನ ಕಾರ್ಯದರ್ಶಿ), ಸೈಫ್ ಮುಹ್ಯುದ್ದೀನ್ (ಸಂಚಾಲಕ), ಎಸ್.ಅಶ್ಪಕ್ ಅಹ್ಮದ್ (ಕೋಶಾಧಿಕಾರಿ), ಫಾರೂಕ್ ಕಾಟಿಪಳ್ಳ (ಪುತ್ತ), ಹಬೀಬ್, ಸಲೀಂ ರಝಾಕ್ ಶ್ಯಾಡೊ, ಮುಹಮ್ಮದ್ ಶಮೀರ್ (ಉಪಾಧ್ಯಕ್ಷರುಗಳು), ಅಬ್ದುಲ್ ಸಮದ್ ಹಾಗೂ ನಿಯಾಝ್ (ಮಾಧ್ಯಮ ಕಾರ್ಯದರ್ಶಿಗಳು), ಷರೀಫ್ ಐಡಿಯಲ್ (ಉಪ ಕೋಶಾಧಿಕಾರಿ), ಇಕ್ಬಾಲ್, ಸಜ್ಜಾದ್, ಇಲ್ಯಾಸ್, ರಿಝ್ವಾನ್ (ಕಾರ್ಯದರ್ಶಿಗಳು), ಆಸಿಫ್, ಸಂಶೀರ್, ವಾಸಿಂ, ಅಮೀರ್ ಅಹ್ಮದ್, ಮುಸ್ತಫಾ, ಸಾಧಿಕ್, ಶಾಫಿ, ಉಮರಬ್ಬ, ರಾಝಿ, ಅಬ್ದುಲ್ ಲತೀಫ್ ಕೆ.ಎಮ್. ( ಸಂಘಟನಾ ಕಾರ್ಯದರ್ಶಿಗಳು) ಅಬ್ದುಲ್ ಗಫೂರ್, ಇಕ್ಬಾಲ್, ನಾಸರ್ ಹಸನ್, ಉನೈಸ್, ಮುಹಮ್ಮದ್ ಶರೀಫ್, ಹಂಝ, ತನ್ಝೀಲ್, ನಾಸರ್ ಬದ್ರಿಯಾ, ಇಮ್ರಾನ್, ನಾಸರ್, ಮುಹಮ್ಮದ್ ಅಝ್ಮಾನ್, ದಾವೂದ್, ಝನ್ವೀರ್, ನೌಫಲ್, ಹೈದರ್ ಅಲಿ, ಇಮ್ತಿಯಾಝ್, ಅಸ್ಪಾಕ್, ದಾವೂದ್ ಅಹ್ಮದ್, ಶಕೀಲ್, ಶಾಹಿಲ್, ಮುಸ್ತಫಾ, ಶಮೀರ್ (ಕಾರ್ಯಕಾರಿ ಸಮಿತಿ ಸದಸ್ಯರು) ಇವರನ್ನು ಆಯ್ಕೆ ಮಾಡಲಾಯಿತು.