ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿವಿಧ ಯೋಜನೆಗಳ ಲೋಕಾರ್ಪಣೆ
ಮಂಗಳೂರು, ಮಾ.11: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮತ್ತು ಎಸ್‌ಕೆಡಿಬಿ ಅಸೋಸಿಯೇಶನ್, ಶಾರದಾ ವಿದ್ಯಾಲಯ,ವಿಪ್ರ ಸಮಾಗಮ ವೇದಿಕೆ, ದ.ಕ. ವಿಪ್ರ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭೋತ್ಸವ, ಎಸೆಸೆಲ್ಸಿ ಜಿಲ್ಲಾವಾರು ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಂಡಳಿಯ ವಿವಿಧ ಯೋಜನೆಗಳ ಲೋಕಾರ್ಪಣೆ ಕಾರ್ಯ ಕ್ರಮವು ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿರುವ ಶ್ರೀ ಕೃಷ್ಣ ಕಲ್ಯಾಣ ಮಂದಿರದಲ್ಲಿ ನಡೆಯಿತು.
ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 10 ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಮೂವರು ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.
ವೇದಿಕೆಯಲ್ಲಿ ಎಸ್‌ಕೆಡಿಬಿ ಅಧ್ಯಕ್ಷ ಪ್ರಭಾಕರ ಪೇಜಾವರ,ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ದ.ಕ. ಜಿಲ್ಲಾ ಸಂಯೋಜಕ ಕೆ. ರಾಜೇಶ್ ನಡ್ಯಂತ್ತೀಲ್ಲಾಯ, ಉಡುಪಿ ಜಿಲ್ಲಾ ಸಂಯೋಜಕ ಶಿವರಾಮ ಉಡುಪ, ನಿರ್ದೇಶಕ ಮಂಡಳಿಯ ಗೌರವ ಸದಸ್ಯರಾದ ಬಿ.ಎಸ್. ರಾಘವೇಂದ್ರ ಭಟ್, ಎ.ಜೆ. ರಂಗವಿಠ್ಠಲ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯದ ಟ್ರಸ್ಟಿಗಳಾದ ಡಾ.ಸೀತಾರಾಮ ಭಟ್ ದಂಡತೀರ್ಥ, ಡಾ. ದಿವಾಕರ ರಾವ್ ಉಪಸ್ಥಿತರಿದ್ದರು.
ಶಾರದಾ ವಿದ್ಯಾಲಯದ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಪ್ರ ಸಮಾಗಮ ವೇದಿಕೆಯ ಅಧ್ಯಕ್ಷ ರಾಮಕೃಷ್ಣ ರಾವ್ ಪಿ. ಸ್ವಾಗತಿಸಿದರು. ಶಾರದಾ ವಿದ್ಯಾ ಸಂಸ್ಥೆಯ ಟ್ರಸ್ಟಿ ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.