ಮಾ. 12: ಏಕೆ ಕುಕ್ಕಿಲರ ಪುಸ್ತಕ ಬಿಡುಗಡೆ ಹಾಗೂ ಬಹುಭಾಷಾ ಕವಿಗೋಷ್ಠಿ
ಮಂಗಳೂರು: ಸನ್ಮಾರ್ಗ ಪತ್ರಿಕೆ ಹಾಗೂ ನ್ಯೂಸ್ ಚಾನೆಲ್ ನ ಸಂಪಾದಕ, ಸಾಹಿತಿ ಏ. ಕೆ. ಕುಕ್ಕಿಲರವರ ಕಥಾ ಸಂಕಲನ- "ಅಮ್ಮನ ಕೋಣೆಗೆ ಏಸಿ ಮತ್ತು ಕಾದಂಬರಿ ವೈರಸ್ : ಅವರಿಬ್ಬರೂ ಪರಾರಿಯಾದರು" ಎಂಬ ಎರಡು ಕೃತಿಗಳ ಬಿಡುಗಡೆ ಹಾಗೂ ಬಹುಭಾಷಾ ಕವಿಗೋಷ್ಠಿಯು ಮಾರ್ಚ್ 12ರ ಸಂಜೆ 4:30ಕ್ಕೆ ಮಂಗಳೂರಿನ ಬಲ್ಮಠದ ಸಹೋದಯ ಹಾಲ್ ನಲ್ಲಿ ನಡೆಯಲಿದೆ ಎಂದು ಬಿಳಿಚುಕ್ಕೆ ಪ್ರಕಾಶನ ಮಂಗಳೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕೃತಿಗಳ ಕುರಿತು ಸಾಹಿತಿ ಅರವಿಂದ ಚೊಕ್ಕಾಡಿ ಮಾತನಾಡಲಿದ್ದು, ಕೃತಿಗಳನ್ನು ಅಬ್ದುರ್ರಹ್ಮಾನ್ ಕುಕ್ಕಿಲ ಬಿಡುಗಡೆ ಮಾಡಲಿ ದ್ದಾರೆ. ಅಧ್ಯಕ್ಷತೆಯನ್ನು ಬಿಳಿಚುಕ್ಕೆ ಪ್ರಕಾಶನದ ಅಧ್ಯಕ್ಷ ಎಸ್.ಎಂ. ಮುತ್ತಲಿಬ್ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಮುಹಮ್ಮದ್ ಅಲಿ ಕಮ್ಮರಡಿ ನಿರ್ವಹಿಸಲಿದ್ದಾರೆ.
ಸಮಾರಂಭದಲ್ಲಿ ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಬಶೀರ್ ಅಹ್ಮದ್ ಕಿನ್ಯ, ಶರೀಫ್ ನಿರ್ಮುಂಜೆ, ಶಂಶಾದ್ ಉಪ್ಪಿನಂಗಡಿ, ಇಮ್ರಾನುಲ್ಲಾ ಖಾನ್ ಮಲ್ಪೆ, ಜಲೀಲ್ ಮುಕ್ರಿ ಭಾಗವಹಿಸಲಿದ್ದಾರೆ ಎಂದು ಬಿಳಿಚುಕ್ಕೆ ಪ್ರಕಾಶನವು ಪ್ರಕಟಣೆಯಲ್ಲಿ ತಿಳಿಸಿದೆ.