ಮಲಬಾರ್ ವಿಶ್ವರಂಗ ಪುರಸ್ಕಾರಕ್ಕೆ ಐವರು ರಂಗಕರ್ಮಿಗಳ ಆಯ್ಕೆ
ಉಡುಪಿ, ಮಾ.11: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆ ಇವರ ಜಂಟಿ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ನೀಡಲಾಗುವ ‘ಮಲಬಾರ್ ವಿಶ್ವರಂಗ ಪುರಸ್ಕಾರ-2021’ ಕ್ಕೆ ರಾಜ್ಯ ಹಾಗೂ ಹೊರ ರಾಜ್ಯದ ಐವರು ಹಿರಿಯ ಕನ್ನಡ ರಂಗಕರ್ಮಿಗಳನ್ನು ಆಯ್ಕೆ ಮಾಡಲಾಗಿದೆ.
ಉಡುಪಿಯ ಎನ್. ರಾಜಗೋಪಾಲ್ ಬಲ್ಲಾಳ್(ನಟ, ಸಂಘಟಕ), ಮಂಗಳೂರಿನ ಲಕ್ಷ್ಮಣ್ ಕುಮಾರ್ ಮಲ್ಲೂರು (ನಟ), ಮುಂಬೈ ಕನ್ನಡ ರಂಗಭೂಮಿಯ ಅಹಲ್ಯಾ ಬಲ್ಲಾಳ್ (ನಟಿ), ಧಾರವಾಡದ ಶಶಿಕಲಾ ಜೋಶಿ (ನಟಿ) ಹಾಗೂ ಉಡುಪಿಯ ಗಂಗಾಧರ ಕಿದಿಯೂರು (ನಾಟಕಕಾರ)ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾದ ರಂಗ ಸಾಧಕರು.
ಇದೇ ಮಾರ್ಚ್ 26ರಂದು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್‌ನ ಉಡುಪಿ ಶಾಖೆಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಯ್ಕೆಯಾದ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಲಬಾರ್ ವಿಶ್ವರಂಗ ಪುರಸ್ಕಾರ ಸಮಿತಿಯ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.