×
Ad

ಶರತ್ ಗುಡ್ಡೆಕೊಪ್ಲ ​ನಿಧನ

Update: 2021-03-11 19:38 IST

ಮಂಗಳೂರು, ಮಾ.11: ಸುರತ್ಕಲ್ ಸಮೀಪದ ಗುಡ್ಡೆಕೊಪ್ಲ ನಿವಾಸಿ ಪರಿಸರ ಹೋರಾಟಗಾರ ಶರತ್ ಗುಡ್ಡೆಕೊಪ್ಲ (60) ಗುರುವಾರ ಬೆಳಗ್ಗೆ ಎರ್ಮಾಳ್‌ನಲ್ಲಿರುವ ತನ್ನ ಪತ್ನಿಯ ಮನೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಮೃತರು ಪತ್ನಿ, ತಂದೆ ಮತ್ತು ತಾಯಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷರಾಗಿದ್ದ ಶರತ್ ಗುಡ್ಡೆಕೊಪ್ಲ ಜನಪರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಪ್ಪಟ ಜಾತ್ಯತೀತರಾಗಿದ್ದ ಅವರು ಮೊಗವೀರ ಸಮುದಾಯದ ಪ್ರಮುಖ ಮುಖಂಡರಾಗಿ ಗುರುತಿಸಲ್ಪಟ್ಟಿದ್ದರು.

ನಾಗಾರ್ಜುನ ಕಂಪೆನಿಯ ವಿರುದ್ಧದ ಹೋರಾಟದಲ್ಲಿ ಮೀನುಗಾರರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೊಗವೀರ ಮಹಾಜನ ಸಭಾದ ಅಧೀನದಲ್ಲಿರುವ ಮಹಾಲಕ್ಷ್ನಿ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರ ಅಂತ್ಯಕ್ರಿಯೆಯನ್ನು ‌ಸುರತ್ಕಲ್‌ನಲ್ಲಿ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News