ಕಾರಿನಲ್ಲಿದ್ದ ವಿದೇಶಿ ಕರೆನ್ಸಿ, ನಗದು ಸಹಿತ ದಾಖಲೆ ಕಳವು
ಮಂಗಳೂರು, ಮಾ.11: ನಗರದ ಚಿಲಿಂಬಿಯಲ್ಲಿ ರಸ್ತೆ ಬದಿ ನಿಲ್ಲಿಸಿದ ಕಾರಿನಿಂದ ನಗದು, ವಿದೇಶಿ ಕರೆನ್ಸಿ ಸೇರಿದಂತೆ ಹಲವು ದಾಖಲೆಗಳನ್ನು ಕಳವು ಮಾಡಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಬೆಳಗ್ಗೆ ಚೇತನ್ ಕುಮಾರ್ (33) ಎಂಬವರು ಮಧ್ಯಾಹ್ನ 12:40ರ ವೇಳೆಗೆ ತನ್ನ ಪತ್ನಿಯೊಂದಿಗೆ ಕಾರಿನಲ್ಲಿ ಬಂದು ಚಿಲಿಂಬಿ ಸೂಪರ್ ಮಾರ್ಕೆಟ್‌ವೊಂದರ (ಮೋರ್) ಎದುರುಗಡೆ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಚಿಲಿಂಬಿ ಸಾಯಿ ಬಾಬಾ ಮಂದಿರಕ್ಕೆ ತೆರಳಿದ್ದರು.
ಮಧ್ಯಾಹ್ನ 1:20ಕ್ಕೆ ಮರಳಿ ಕಾರಿನ ಬಳಿ ಬಂದಾಗ ಯಾರೋ ಕಳ್ಳರು ಕಾರಿನ ಎಡಬದಿ ಹಿಂಬದಿ ಗ್ಲಾಸ್‌ನ್ನು ಒಡೆದು ಕಾರಿ ನೊಳಗಿದ್ದ ಬ್ಯಾಗ್ ಕಳವು ಮಾಡಿ ಹೋಗಿದ್ದಾರೆ. ಅದರಲ್ಲಿ 20ಸಾವಿರ ರೂ. ನಗದು, 40 ಸಾವಿರ ರೂ. ಮೌಲ್ಯದ ವಿದೇಶಿ ಕರೆನ್ಸಿ, ಎಟಿಎಂ ಕಾರ್ಡ್, ಎಮಿರೆಡ್ಸ್ ಐಡಿ, ಆಧಾರ್ ಕಾರ್ಡ್, ತನ್ನ ಪತ್ನಿಯ ದುಬೈ ಇಸ್ಲಾಮಿಕ್ ಬ್ಯಾಂಕ್ ಎಟಿಎಂ ಕಾರ್ಡ್, ಅಲ್ಲದೆ ಪಾಸ್‌ಪೋರ್ಟ್ ಇತ್ತೆಂದು ತಿಳಿದುಬಂದಿದೆ. ಚೇತನ್ ಕುಮಾರ್ ಅವರು ದುಬಾಯಿನಲ್ಲಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ವಾಪಸ್ ಹೋಗುವವರಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.