ಕಮಲ್‌ ಹಾಸನ್‌ ಪಕ್ಷದೊಂದಿಗಿನ ಮೈತ್ರಿ ಕಡಿದುಕೊಂಡ ಎಸ್ಡಿಪಿಐ

Update: 2021-03-11 14:29 GMT
PHOTO: ANI

ಚೆನ್ನೈ: ಕಮಲ್‌ ಹಾಸನ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ೧೮ ಸೀಟುಗಳನ್ನು ಪಡೆದುಕೊಂಡಿದ್ದ ಎಸ್ಡಿಪಿಐ ಇದೀಗ ಕಮಲ್‌ ಹಾಸನ್‌ ರ ಮಕ್ಕಳ್‌ ನೀದಿ ಮೈಯಂ ಪಕ್ಷದೊಂದಿಗಿನ ಮೈತ್ರಿ ಕಡಿದುಕೊಂಡಿದೆ ಎಂದು ANI ವರದಿ ಮಾಡಿದೆ. ಇದೀಗ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿಟಿವಿ ದಿನಕರನ್‌ ರ ಎಎಂಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ವರದಿ ತಿಳಿಸಿದೆ.

ಈ ಕುರಿತಾದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ತಮಿಳುನಾಡಿನ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಪಕ್ಷದ ಅಧ್ಯಕ್ಷ ನೆಲ್ಲೈ ಮುಬಾರಕ್., "ನಾವು ಎಎಂಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಅಲಂದೂರು, ಅಂಬೂರು, ತ್ರಿಚಿ ವೆಸ್ಟ್‌, ತಿರುವರೂರ್‌, ಮಧುರೈ ಸೆಂಟ್ರಲ್‌ ಹಾಗೂ ಪಲಯಂಕೋಟೈನಲ್ಲಿ ಸ್ಫರ್ಧಿಸಲಿದ್ದೇವೆ"

"ನಮಗೆ ಒಟ್ಟು ೬ ಸೀಟುಗಳನ್ನು ನೀಡಲಾಗಿದೆ. ನಾವು ಈಗಾಗಲೇ ಕಮಲ್‌ ಹಾಸನ್‌ ರ ಪಕ್ಷದ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇವೆ. ಸದ್ಯ ಎಎಂಎಂಕೆಯೊಂದಿಗೆ ಮೈತ್ರಿ ಮುಂದುವರಿಸಲಾಗುವುದು ಎಂದು ನಾಯಕರು ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News