×
Ad

ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಿಂದ ನಾರಿ ಶಕ್ತಿ ಪ್ರಶಸ್ತಿ

Update: 2021-03-11 20:09 IST

ಮಂಗಳೂರು, ಮಾ.11: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಿಂದ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 6 ಮಂದಿ ಮಹಿಳೆಯರಿಗೆ ನಾರಿಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಹಿಳಾ ಸಬಲೀಕರಣ, ಸಮುದಾಯ ಸೇವೆ, ಸಮಾಜದಲ್ಲಿ ಬದಲಾವಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಿಂದ 2019ರಿಂದ ನಾರಿಶಕ್ತಿ ಪ್ರಸ್ತಿಯನ್ನು ಆರಂಭಿಸಲಾಗಿದೆ.

ಈ ಬಾರಿ ಆಸರೆ ಮಹಿಳಾ ಫೌಂಡೇಶನ್‌ನ ಅಧ್ಯಕ್ಷೆ ಶಬೀನಾ ರವೂಫ್ ಪುತ್ತಿಗೆ, ನಿವೃತ್ತ ಶಿಕ್ಷಕಿ ಜಿಲ್ಲಿ ಲೋಬೋ, ಶ್ರೀನಿವಾಸ ದಂತ ವಿಜ್ಞಾನ ಸಂಸ್ಥೆಯ ಎಚ್‌ಒಡಿ ಪ್ರೊ. ಡಾ. ಚಾಂದಿನಿ, ಆರೋಗ್ಯ ಇಲಾಖೆಯ ಲಸಿಕೆ ಕಾರ್ಯಕ್ರಮದ ವ್ಯವಸ್ಥಾಪಕರಾದ ಜೆಸ್ಸಿಕಾ, ಕ್ಯಾಮರೋನ್ ಸ್ಟುಡಿಯೋದ ಎಂಡಿ ರೊವಿನಾ ಬ್ರಿಟ್ಟೋ, ಫಾದರ್ ಮುಲ್ಲರ್ ಆಸ್ಪತ್ರೆಯ ಡಾ. ಸ್ಟೆಫನಿ ರಾಚೆಲ್ ಡಿಸೋಜಾ ಅವರಿಗೆ ನಾರಿ ಶಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಹಿಳಾ ದಿನಾಚರಣೆಯಂದು ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಲ್ತಾನ್ ಗ್ರೂಪ್‌ನ ಆಡಳಿತ ನಿರ್ದೇಶಕ ಡಾ. ಟಿ.ಎಂ. ಅಬ್ದುಲ್ ರವೂಫ್‌ರವರ ಪತ್ನಿ ಮೆಹರುನ್ನಿಸಾ ರವೂಫ್, ಸುಲ್ತಾನ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಟಿ.ಎಂ. ಅಬ್ದುಲ್ ರಹೀಂರವರ ಪತ್ನಿ ತೆಹ್ಸಿ ರಹೀಂ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭ ಸಂಸ್ಥೆಯ ಶಾಖಾ ವ್ಯವಸ್ಥಾಪಕ ಅಬ್ದುಲ್ ಸತ್ತಾರ್, ಸಹಾಯಕ ಶಾಖಾ ವ್ಯವಸ್ಥಾಪಕ ಮುಸ್ತಫಾ ಕಕ್ಕಿಂಜೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News