×
Ad

ಸುಬ್ರಹ್ಮಣ್ಯ : ಹೊಳೆಗೆ ಬಿದ್ದು ಮಾಜಿ ಗ್ರಾಪಂ ಸದಸ್ಯ ಮೃತ್ಯು

Update: 2021-03-11 20:44 IST

ಸುಬ್ರಹ್ಮಣ್ಯ : ಮಾಜಿ ಗ್ರಾ.ಪಂ ಸದಸ್ಯ ಕುಶಾಲಪ್ಪ ಪೂಜಾರಿ ಚಿಕ್ಕನಮಜಲು ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಸುಬ್ರಹ್ಮಣ್ಯ ಗ್ರಾ.ಪಂ ನ ಮಾಜಿ ಸದಸ್ಯ ಏನೆಕಲ್ಲು ಗ್ರಾಮದ ಕುಶಾಲಪ್ಪ ಪೂಜಾರಿ ಚಿಕ್ಕನಮಜಲು ಇಂದು ಬೆಳಗ್ಗೆ ನೀರಿಗೆ ಬಿದ್ದು  ಮೃತಪಟ್ಟಿದ್ದಾರೆ.

ಗುರುವಾರ ಬೆಳಗ್ಗೆ ಮನೆಯಿಂದ ಹೊರ ಹೋದವರು ಹೊಳೆ ಬದಿ ನೀರಿಗೆ ಬಿದ್ದು ಮೃತಪಟ್ಟಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಹೃದಯಾಘಾತದಿಂದ ಮೃತಪಟ್ಟಿರಬೇಕು ಎನ್ನಲಾಗಿದೆ.

ಮೃತರು ಪತ್ನಿ ಹಾಲಿ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಶಶಿಕಲಾ ಜಿಕ್ಕನಮಜಲು ಹಾಗು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News