×
Ad

ಟಿಎಂಸಿ ಆರೋಪ ಸಂಪೂರ್ಣ ತಪ್ಪು ಎಂದ ಚುನಾವಣಾ ಆಯೋಗ

Update: 2021-03-11 20:51 IST

ಹೊಸದಿಲ್ಲಿ: ನಂದಿಗ್ರಾಮದಲ್ಲಿ ಬುಧವಾರ ಜನಜಂಗುಳಿಯಲ್ಲಿ ಗಾಯಗೊಂಡಿದ್ದ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ರಕ್ಷಣೆ ನೀಡಲು ಚುನಾವಣಾ ಆಯೋಗ ವಿಫಲವಾಗಿದೆ ಎಂಬ ತೃಣಮೂಲ ಕಾಂಗ್ರೆಸ್ ಆರೋಪವನ್ನು ಚುನಾವಣಾ ಆಯೋಗವು ಇಂದು ತಿರಸ್ಕರಿಸಿದೆ.

ಚುನಾವಣೆ ನಡೆಯಲಿರುವ ಪ.ಬಂಗಾಳದ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತಿರುವ ಚುನಾವಣಾ ಆಯೋಗ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲ. ತಮ್ಮ ಪಕ್ಷದ ಮುಖ್ಯಸ್ಥೆಯ ಜೀವ ತೆಗೆಯಲು ಭಾರೀ ಸಂಚು ನಡೆದಿದೆ ಎಂದು ಟಿಎಂಸಿ ಆರೋಪಿಸಿತ್ತು.

ಇದೊಂದು ಸಂಪೂರ್ಣ ಪ್ರಚೋದನಕಾರಿಯಾಗಿದ್ದು,ತಾನು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಯಂತ್ರವನ್ನು ಸಂಪೂರ್ಣ ವಶಕ್ಕೆ ತೆಗದುಕೊಂಡಿದ್ದೇನೆಂಬ ಟಿಎಂಸಿ ಆರೋಪವು ಸಂಪೂರ್ಣ ತಪ್ಪು ಎಂದು ಚುನಾವಣಾ ಆಯೋಗ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News