ಉಡುಪಿ ಜಿಲ್ಲೆಯ ಒಟ್ಟು 6437 ಮಂದಿ ಹಿರಿಯ ನಾಗರಿಕರಿಂದ ಲಸಿಕೆ ಸ್ವೀಕಾರ
Update: 2021-03-11 20:51 IST
ಉಡುಪಿ, ಮಾ.11: ಜಿಲ್ಲೆಯ 60 ವರ್ಷಕ್ಕಿಂತ ಮೇಲ್ಪಟ್ಟ ಒಟ್ಟು 6437 ಮಂದಿ ಹಿರಿಯ ನಾಗರಿಕರು ಕೋವಿಡ್-19ಕ್ಕೆ ಲಭ್ಯ ವಿರುವ ಕೋವಿಶೀಲ್ಡ್ ಲಸಿಕೆಯನ್ನು ಗುರುವಾರದ ವರೆಗೆ ಪಡೆದುಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಅಲ್ಲದೇ 45ರಿಂದ 59 ವರ್ಷದೊಳಗಿನ ಅನ್ಯರೋಗದಿಂದ ನರಳುವ 560 ಮಂದಿ ಈವರೆಗೆ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಉಳಿದಂತೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯುತ್ತಿರುವ ಒಟ್ಟು 23,889 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಗುರುವಾರದವರೆಗೆ ಒಟ್ಟು 17,348 ಮಂದಿ ಮೊದಲ ಡೋಸ್‌ನ್ನೂ 13,383 ಮಂದಿ ಎರಡನೇ ಎರಡನೇ ಡೋಸ್‌ನ್ನು ಸ್ವೀಕರಿಸಿದ್ದಾರೆ.
ಎರಡನೇ ಹಂತದಲ್ಲಿ ಲಸಿಕೆ ಪಡೆಯುತ್ತಿರುವ ಜಿಲ್ಲೆಯ ಒಟ್ಟು 4283 ಮಂದಿ ಮುಂಚೂಣಿ ಕಾರ್ಯಕರ್ತರ ಪೈಕಿ ಒಟ್ಟು 3839 ಮಂದಿ ಮೊದಲ ಡೋಸ್‌ನ್ನೂ ಒಟ್ಟು 254 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.