ಉ.ಪ್ರ:ರಸ್ತೆ ಬದಿಯ ಪೊದೆಯಲ್ಲಿ ಮಹಿಳೆಯ ಸುಟ್ಟು ಕರಕಲಾದ ಮೃತದೇಹ ಪತ್ತೆ
Update: 2021-03-11 21:09 IST
ಫತೇಪುರ,ಮಾ.11: ಫತೇಪುರ ಜಿಲ್ಲೆಯ ಕಲ್ಯಾಣಪುರದಲ್ಲಿ ಗುರುವಾರ ಅಪರಿಚಿತ ಮಹಿಳೆಯೋರ್ವಳ ಸುಟ್ಟು ಕರಕಲಾಗಿರುವ ಮೃತದೇಹ ರಸ್ತೆ ಬದಿಯ ಪೊದೆಯೊಂದರಲ್ಲಿ ಪತ್ತೆಯಾಗಿದೆ.
ಸುಮಾರು 25ರ ಹರೆಯದ ಮಹಿಳೆಯ ಶವವು ಮುರಾದಿಪುರ-ಬಿಂಡ್ಕಿ ರಸ್ತೆ ಬದಿಯ ಪೊದೆಯಲ್ಲಿ ಪತ್ತೆಯಾಗಿದ್ದು,ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಮಹಿಳೆಯನ್ನು ಬೇರೆಲ್ಲಿಯೋ ಕೊಂದು ಶವವನ್ನು ಇಲ್ಲಿ ಎಸೆದು ಬೆಂಕಿ ಹಚ್ಚಿರುವಂತೆ ಕಂಡು ಬರುತ್ತಿದೆ ಎಂದರು.
ಮೃತಳ ಗುರುತನ್ನು ಪತ್ತೆ ಹಚ್ಚುವ ಪ್ರಯತ್ನವಾಗಿ ಪೊಲೀಸರು ನಾಪತ್ತೆಯಾಗಿರುವ ವ್ಯಕ್ತಿಗಳ ಪಟ್ಟಿಗಳನ್ನು ನೆರೆಯ ಪೊಲೀಸ್ ಠಾಣೆಗಳಿಂದ ಕೋರಿದ್ದಾರೆ ಎಂದು ತಿಳಿದು ಬಂದಿದೆ.