ಶಿವರಾತ್ರಿ ಪ್ರಯುಕ್ತ ಕಂದಕ್ ಮುಸ್ಲಿಂ ಜಮಾಅತ್ ಸದಸ್ಯರಿಂದ ಸಿಹಿತಿಂಡಿ, ತಂಪು ಪಾನೀಯ ವಿತರಣೆ
Update: 2021-03-11 21:33 IST
ಮಂಗಳೂರು : ಶಿವರಾತ್ರಿ ಪ್ರಯುಕ್ತ ಕಂದಕ್ ಮುಸ್ಲಿಂ ಜಮಾಅತ್ ಸದಸ್ಯರು ಸಿಹಿತಿಂಡಿ, ತಂಪು ಪಾನೀಯ ವಿತರಿಸಿದರು.
ನಗರದ ಕಂದಕ್ ಪ್ರದೇಶದ ಬದ್ರಿಯಾ ಜಂಕ್ಷನ್ ವಠಾರದಲ್ಲಿ ಶಿವರಾತ್ರಿ ಪ್ರಯುಕ್ತ ನಿತ್ಯಾನಂದ ಆಶ್ರಮ ವತಿಯಿಂದ ವರ್ಷಂಪ್ರತಿ ನಡೆಯುವ ಶೋಭಾಯಾತ್ರೆ ಸಂದರ್ಭ ಕಂದಕ್ ಮುಸ್ಲಿಂ ಜಮಾಅತ್ ಸದಸ್ಯರು ಸಿಹಿತಿಂಡಿ ಹಾಗೂ ತಂಪು ಪಾನೀಯವನ್ನು ವಿತರಿಸಿದರು.
ಈ ಸಂದರ್ಭ ಸ್ಥಳೀಯ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ ಅವರೊಂದಿಗೆ ಮುಸ್ಲಿಂ ಜಮಾಅತ್ ಸದಸ್ಯರಾದ ಸಿದ್ದೀಕ್, ಆಸಿಫ್, ಅಹ್ಮದ್, ಬದ್ರುದ್ದೀನ್, ಮುಸ್ತಫಾ, ತ್ವಾಹಿರ್, ನಿಝಾಮುದ್ದೀನ್, ಶಾಝ್, ರಿಲ್ವಾನ್ ಹಾಗು ಶ್ರೀ ನಿತ್ಯಾನಂದ ಆಶ್ರಮದ ಸಮಿತಿಯ ಹನುಮಂತ ಕಾಮತ್, ರೋಹಿತ್, ಸದಾಶಿವ ಶೆಟ್ಟಿ, ಹರೀಶ್, ಸುಕೇತ್, ರಾಜೇಶ್, ಪ್ರಮೋದ್, ಶೈಲೇಶ್, ಪುರುಷತ್ತೋಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.