×
Ad

ಮಂಗಳೂರು : ಕಾರಿನಲ್ಲಿದ್ದ ಒಂದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

Update: 2021-03-11 22:24 IST

ಮಂಗಳೂರು : ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು ಅದರೊಳಗಿದ್ದ ಸುಮಾರು ಒಂದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಗುರುವಾರ ಮಧ್ಯಾಹ್ನದ ಸುಮಾರಿಗೆ ಉರ್ವದಲ್ಲಿ ನಡೆದಿದೆ.

ಇಲ್ಲಿನ ಶಿರಡಿ ಸಾಯಿ ಬಾಬಾ ಮಂದಿರದ  ದ್ವಾರದ ಮುಂಭಾಗ ಕಾರು ನಿಲ್ಲಿಸಿ ಮಂದಿರಕ್ಕೆ ತೆರಲಿದ್ದ ವೇಳೆ ದುಷ್ಕರ್ಮಿಗಳ ತಂಡ  ಕಾರಿನ‌ ಕಿಟಕಿಯ ಗಾಜು ಹೊಡೆದು ಕಾರಿನಲ್ಲಿದ್ದ ಪಾಸ್ ಪೋರ್ಟ್, ಅಧಾರ್ ಕಾರ್ಡ್ ಎಟಿಎಮ್ ಕಾರ್ಡ್ಹಾಗೂ ಸುಮಾರು ಒಂದು ಲಕ್ಷ ರೂ. ಬೆಲೆ ಬಾಳುವ ಚಿನ್ನವನ್ನು ಕಳವು ಮಾಡಿದ್ದಾರೆ.

ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೊ ವೈರಲ್ ಆಗಿದೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News