ಬ್ರೇವ್ ಸಿಎಫ್-47: ಪಾಕಿಸ್ತಾನದ ಕರೀಮ್ ವಿರುದ್ಧ ಭಾರತದ ಫರ್ಹಾದ್ ಗೆ ಜಯ

Update: 2021-03-12 06:11 GMT

ಬಹರೈನ್: ಬ್ರೇವ್ ಸಿಎಫ್ 47: ಏಶ್ಯನ್ ಡಾಮಿನೇಶನ್ ಮಿಕ್ಸೆಡ್ ಮಾರ್ಷಲ್ ಆರ್ಟ್ ಸ್ಪರ್ಧೆಯು ಗುರುವಾರ ಬಹರೈನ್ ನ ಅರಾದ್ ಫೋರ್ಟ್‍ನಲ್ಲಿ ನಡೆದಿದ್ದು, ಭಾರತದ ಮುಹಮ್ಮದ್ ಫರ್ಹಾದ್ ಅವರು ಪಾಕಿಸ್ತಾನದ ಕರೀಂ ಉಲೂಮಿ ಅವರನ್ನು ದ್ವಿತೀಯ ಸುತ್ತಿನಲ್ಲಿ ನಾಕೌಟ್ ನಲ್ಲಿ ಸೋಲಿಸಿದ್ದಾರೆ. ಈ ಮೂಲಕ ಮಿಕ್ಸೆಡ್ ಮಾರ್ಷಲ್ ಆರ್ಟ್ ಸ್ಪರ್ಧೆಯಲ್ಲಿ ಭಾರತೀಯ ಧ್ವಜ ರಾರಾಜಿಸುವಂತೆ ಮಾಡಿದ್ದಾರೆ.

ಬ್ರೇವ್ ಸಿಎಫ್ 47: ಏಶ್ಯನ್ ಡಾಮಿನೇಶನ್‍ನಲ್ಲಿ ಬಹು ನಿರೀಕ್ಷಿತ ಸ್ಪರ್ಧೆಯಲ್ಲಿ ಒಂದಾಗಿದ್ದ ಮಹಾರಾಷ್ಟ್ರದ ಮುಹಮ್ಮದ್ ಫರ್ಹಾದ್ ಹಾಗೂ ಪಾಕಿಸ್ತಾನದ ಕರೀಮ್ ನಡುವಿನ ಹೋರಾಟದಲ್ಲಿ ಫರ್ಹಾದ್ ಗೆಲುವನ್ನು ತನ್ನದಾಗಿಸಿಕೊಂಡರು. ವಿಜಯದ ನಂತರ ಮಾತನಾಡಿದ ಫರ್ಹಾದ್, ಗೆಲುವನ್ನು ತಮ್ಮ ದೇಶಕ್ಕೆ ಅರ್ಪಿಸಿದರು. 

“ನಾನು 1.1 ಬಿಲಿಯನ್ ಜನರನ್ನು ಪ್ರತಿನಿಧಿಸುತ್ತೇನೆ. ನಾವೆಲ್ಲರೂ ಭಾರತೀಯರು. ನಾನು ಸ್ಪರ್ಧಾ ಕಣಕ್ಕೆ ಕಾಲಿಟ್ಟ ತಕ್ಷಣ ನಾನಿದನ್ನು ಸಾಧಿಸಬಲ್ಲೆ ಎಂದು ನನಗೆ ಗೊತ್ತಿದೆ. ಧನ್ಯವಾದ’’ ಎಂದು ಹೇಳಿದರು.

ಬಹರೈನ್ ನಲ್ಲಿ ನಡೆದಿದ್ದ ಬ್ರೇವ್ ಸಿಎಫ್‍ನ ಮೊದಲ ಹೋರಾಟದಲ್ಲಿ ಭಾಗವಹಿಸಿರುವ ಫರ್ಹಾದ್ 11-3 ವೃತ್ತಿಪರ ದಾಖಲೆ ಹೊಂದಿದ್ದಾರೆ. ಫರ್ಹಾದ್ ನಾಕೌಟ್ ಅಥವಾ ಟೆಕ್ನಿಕಲ್ ನಾಕೌಟ್ ಮೂಲಕವೇ ಬ್ರೇವ್ ಸಿಎಫ್‍ಯಲ್ಲಿ ಎಲ್ಲ 3 ಗೆಲುವನ್ನು ಪಡೆದಿದ್ದಾರೆ. 

ಉಲೂಮಿ ಕರೀಮ್ ವಿರುದ್ದ ಜಯ ಸಾಧಿಸಿರುವ ಭಾರತದ ಎಂಎಂಎ ಸ್ಟಾರ್ ಫರ್ಹಾದ್ ತೆರವಾಗಿರುವ ಬ್ರೇವ್ ಸಿಎಫ್ ಬಾಂಟಮ್‍ವೇಟ್ ಪ್ರಶಸ್ತಿ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News