×
Ad

ಜೆಇಇ ಮೈನ್ಸ್ : ವಿದ್ಯೋದಯ ಪ.ಪೂ.ಕಾಲೇಜು ಸಾಧನೆ

Update: 2021-03-12 18:46 IST

ಉಡುಪಿ, ಮಾ.12: ಉಡುಪಿ ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಎಂಟು ಮಂದಿ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಜನವರಿಯಲ್ಲಿ ನಡೆದ ಅಖಿಲ ಭಾರತ ಮಟ್ಟದ ಜೆಇಇ ಮೈನ್ ಪರೀಕ್ಷೆಯಲ್ಲಿ ಶೇ.90 ಪರ್ಸಂಟೈಲ್‌ಗಿಂತ ಅಧಿಕ ಪಡೆದ ಸಾಧನೆ ಮಾಡಿದ್ದಾರೆ.

ಕಾಲೇಜಿನ ಪ್ರಣಮ್ ಪಿ. ಶೆಟ್ಟಿ 97.089, ಧವನ್ 95.548, ಪ್ರೀತಮ್ ಎಚ್. ಸುವರ್ಣ 94.48, ಅಭಿಷೇಕ್ 93.892, ಭಾರ್ಗವಿ ಬೋರ್ಕರ್ 93.54, ವೈಷ್ಣವಿ 93.18, ಪ್ರಥಮ್ ಬಿ. ದೇವಾಡಿಗ 93 ಮತ್ತು ಪ್ರಣಯ್ ಯು. ಶೆಟ್ಟಿ 92.39 ಪರ್ಸಂಟೈಲ್ ಪಡೆದಿ ದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News