×
Ad

ಹೂಡೆಯ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

Update: 2021-03-12 19:21 IST

ಉಡುಪಿ, ಮಾ.12: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ವತಿಯಿಂದ ಸೂರಿಲ್ಲದವರಿಗೆ ಸೂರು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯಡಿ ದಾನಿಗಳ ನೆರವಿನೊಂದಿಗೆ ಮಾ.11ರಂದು 15ನೆಯ ಮನೆಯನ್ನು ಹಸ್ತಾಂತರಿಸಲಾಯಿತು.

ಕೆಲವು ವರ್ಷಗಳಿಂದ ಆರ್ಥಿಕ ಕೊರತೆಯಿಂದಾಗಿ ಅಪೂರ್ಣ ಸ್ಥಿತಿಯಲ್ಲಿದ್ದ ಚಂದ್ರಶೇಖರ್ ಅವರ ಮನೆಯನ್ನು ಸಂಘಟನೆಯ ವತಿಯಿಂದ ಪೂರ್ಣ ಗೊಳಿಸಿ ಹಸ್ತಾಂತರಿಸಲಾಯಿತು. ಮನೆ ಹಸ್ತಾಂತರವನ್ನು ಕಾಪು ಜಮಾಅತೆ ಇಸ್ಲಾಮಿ ಹಿಂದ್ನ ಅಧ್ಯ ಅನ್ವರ್ ಅಲಿ ಕಾಪು ಮನೆಯ ಮಾಲಕ ಚಂದ್ರಶೇಖರ್ ಅವರಿಗೆ ಕೀಲಿ ಕೈ ನೀಡುವ ಮುಖಾಂತರ ನೆರೆವೇರಿಸಿದರು.

ಈ ಸಂದರ್ಭದಲ್ಲಿ ಚೇರ್ಕಾಡಿ ಗ್ರಾಪಂ ಪಿಡಿಓ ಸುಭಾಶ್, ತೋನ್ಸೆ ಗ್ರಾವಪಂ ಕಾರ್ಯದರ್ಶಿ ದಿನಕರ್ ಬೆಂಗ್ರೆ, ಜೆ.ಐ.ಎಚ್ ಹೂಡೆ ಘಟಕದ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್, ತೋನ್ಸೆ ಗ್ರಾಪಂ ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ತೋನ್ಸೆ ಗ್ರಾಪಂ ಸದಸ್ಯ ರಾದ ಇದ್ರಿಸ್ ಹೂಡೆ, ವಿಜಯ, ಪ್ರತಿಭಾ, ಜಮೀಲಾ ಸದೀದಾ, ಮಹೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News