ಕೊರೋನ ಲಸಿಕೆಗಳ ರಫ್ತಿಗೆ ನಿರ್ಬಂಧವಿಲ್ಲ: ಅಮೆರಿಕ

Update: 2021-03-12 14:40 GMT

ವಾಶಿಂಗ್ಟನ್, ಮಾ. 12: ಕೋವಿಡ್-19 ಲಸಿಕೆಗಳ ರಫ್ತಿನ ಮೇಲೆ ಯಾವುದೇ ರೀತಿಯ ನಿರ್ಬಂಧವನ್ನು ವಿಧಿಸಲಾಗಿಲ್ಲ ಎಂದು ಅವೆುರಿಕ ಸರಕಾರ ಗುರುವಾರ ಹೇಳಿದೆ.

 ಆ್ಯಸ್ಟ್ರಝೆನೆಕ ಕೋವಿಡ್-19 ಲಸಿಕೆಗಳನ್ನು ಶೀಘ್ರದಲ್ಲಿ ನಿರೀಕ್ಷಿಸಬಾರದು ಎಂಬುದಾಗಿ ಅಮೆರಿಕವು ಐರೋಪ್ಯ ಒಕ್ಕೂಟಕ್ಕೆ ತಿಳಿಸಿದೆ ಎಙಂಬ ವರದಿಗಳ ಹಿನ್ನೆಲೆಯಲ್ಲಿ ಅದು ಈ ಸ್ಪಷ್ಟೀಕರಣ ನೀಡಿದೆ.

‘‘ನಾವು ಆ್ಯಸ್ಟ್ರಝೆನೆಕ ಲಸಿಕೆಗಳನ್ನು ಖರೀದಿಸುತ್ತಿಲ್ಲ. ಹಾಗಾಗಿ, ಅದರ ರಫ್ತಿನ ಮೇಲೆ ಯಾವುದೇ ನಿರ್ಬಂಧವಿಲ್ಲ. ಅದೇ ವೇಳೆ, ಅವೆುರಿಕದ ಎಲ್ಲ ಕೊರೋನ ವೈರಸ್ ಲಸಿಕೆಗಳ ಉತ್ಪಾದಕರು ಅಮೆರಿಕ ಸರಕಾರದೊಂದಿಗೆ ಮಾಡಿಕೊಂಡ ಒಪ್ಪಂದಗಳ ಶರತ್ತುಗಳನ್ನು ಪೂರೈಸುತ್ತಾ, ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಸ್ವತಂತ್ರರಾಗಿದ್ದಾರೆ’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯಧರ್ಶಿ ಜೆನ್ ಸಾಕಿ ತನ್ನ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

ಅವೆುರಿಕದ ಲಸಿಕೆ ತಯಾರಿಕಾ ಕಂಪೆನಿಗಳು ಅಮೆರಿಕಕ್ಕಾಗಿ ಲಸಿಕೆಗಳನ್ನು ಉತ್ಪಾದಿಸುತ್ತಿವೆ. ಆದರೆ, ಅವುಗಳು ಬೇರೆ ದೇಶಗಳಿಗಾಗಿಯೂ ಲಸಿಕೆಗಳನ್ನು ಉತ್ಪಾದಿಸಬಹುದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News