×
Ad

ಸಂಶಯಾಸ್ಪದ ವ್ಯಕ್ತಿಯ ಬಂಧನ

Update: 2021-03-12 22:25 IST

ಉಡುಪಿ, ಮಾ.12: ನಗರದ ಸಿಟಿ ಬಸ್ ನಿಲ್ದಾಣದ ಬೃಂದಾವನ ಲಾಡ್ಜ್ ಬಳಿ ಮಾ.12ರಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಸಂಶಯಾಸ್ಪದವಾಗಿ ನಿಂತಿದ್ದ ವ್ಯಕ್ತಿಯೊಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಅತರ್ಗ ಗ್ರಾಮದ ಅಮಿತ್ ನಾಗನೂರು(21) ಬಂಧಿತ ಆರೋಪಿ. ಕತ್ತಲೆಯಲ್ಲಿ ಗೋಡೆ ಬದಿ ಸಂಶಯಾಸ್ಪದವಾಗಿ ನಿಂತುಕೊಂಡಿದ್ದ ಈತನನ್ನು ಯಾವುದಾದರೂ ಕೃತ್ಯ ಎಸಗುವ ಬಲವಾದ ಸಂಶಯ ಆಧಾರದ ಮೇರೆಗೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News