ಪ್ರತ್ಯೇಕ ಪ್ರಕರಣ : ಕಾರಿನಲ್ಲಿದ್ದ ಎರಡು ಲ್ಯಾಪ್‌ಟಾಪ್ ಕಳವು
Update: 2021-03-12 22:29 IST
ಉಡುಪಿ, ಮಾ.12: ನಗರದಲ್ಲಿ ಮಾ.11ರಂದು ನಡೆದ ಪ್ರತ್ಯೇಕ ಘಟನೆ ಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳಲ್ಲಿನ ಲ್ಯಾಪ್‌ಟಾಪ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ರಾಜ್ ಟವರ್ಸ್ ಸಮೀಪ ನಿಲ್ಲಿಸಿದ್ದ ಕೊರಂಗ್ರಪಾಡಿಯ ರಕ್ಷಾ ಯು. ಎಂಬವರ ಕಾರಿನ ಗಾಜನ್ನು ಒಡೆದ ಕಳ್ಳರು, ಒಳಗೆ ಇದ್ದ 25ಸಾವಿರ ರೂ. ವೌಲ್ಯದ ಲ್ಯಾಪ್ಟಾಪ್ ಕಳವು ಮಾಡಿ ದ್ದಾರೆ. ಅದೇ ರೀತಿ ಉಡುಪಿ ಬೃಂದಾ ವನ ಸರ್ಕಲ್ ಬಳಿ ನಿಲ್ಲಿಸಿದ್ದ ಮಣಿಪಾಲದ ಡಾ. ನಮನ್ ಅಗಾರ್ವಾಲ್ ಎಂಬವರ ಕಾರಿನ ಗಾಜು ಒಡೆದ ಕಳ್ಳರು, ಒಳಗಿದ್ದ 70 ಸಾವಿರ ರೂ. ಮೌಲ್ಯದ ಲ್ಯಾಪ್ಟಾಪ್ ಕಳವು ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.