ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಚಿನ್ನಾಭರಣ ಕಳವು
Update: 2021-03-12 22:31 IST
ಮಲ್ಪೆ, ಮಾ.12: ಮಲ್ಪೆ ಬೀಚ್‌ಗೆ ವಿಹಾರಕ್ಕೆ ಬಂದಿದ್ದ ಪ್ರವಾಸಿಗರ ಪರ್ಸ್‌ನಲ್ಲಿದ್ದ ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಮಾ.9ರಂದು ಅಪರಾಹ್ನ ವೇಳೆ ನಡೆದಿದೆ.
ಮೈಸೂರಿನ ಪ್ರವೀಣ್ ಕುಮಾರ್ ಎಂಬವರು ಪ್ರವಾಸಕ್ಕಾಗಿ ಕುಟುಂಬದ ವರೊಂದಿಗೆ ಮಲ್ಪೆಬೀಚ್ಗೆ ಬಂದಿದ್ದು, ಈ ವೇಳೆ ತಮ್ಮಲ್ಲಿದ್ದ ಚಿನ್ನಾಭರಣ ಗಳನ್ನು ಪರ್ಸ್‌ನಲ್ಲಿ ಹಾಕಿ ಪ್ರವೀಣ್ ಅವರ ಅತ್ತೆ ಬಳಿ ಕೊಟ್ಟು ಎಲ್ಲರು ನೀರಿಗೆ ಇಳಿದಿದ್ದರು. ತೀರದಲ್ಲಿ ಕುಳಿತಿದ್ದ ಅತ್ತೆ ನಿದ್ದೆಗೆ ಜಾರಿದಾಗ ಪರ್ಸ್‌ನಲ್ಲಿದ್ದ ಚಿನ್ನಾಭರಣ ಕಳ್ಳರು ಕಳವು ಮಾಡಿದ್ದಾರೆನ್ನಲಾಗಿದೆ.
ಕಳವಾಗಿರುವ ಒಟ್ಟು 48.5 ಗ್ರಾಂ ಚಿನ್ನಾಭರಣಗಳ ಮೌಲ್ಯ 2.50ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.